ಧರ್ಮಸ್ಥಳ: 12 ಕಾರ್ಮಿರಿಂದ 2 ತಂಡಗಳಾಗಿ ಅಗೆತ, ಇಲ್ಲಿದೆ ಕ್ಷಣ ಕ್ಷಣದ ರಿಪೋರ್ಟ್

dharmasthala
29/07/2025

ಧರ್ಮಸ್ಥಳ: ಧರ್ಮಸ್ಥಳ ಸ್ನಾನ ಘಟದ ಸಮೀಪ ಉತ್ಖನನ ಕಾರ್ಯ ಮುಂದುವರಿದಿದೆ. 12 ಮಂದಿ ಕಾರ್ಮಿಕರು 2 ತಂಡಗಳಾಗಿ ಅಗೆತ ಆರಂಭಿಸಿದ್ದಾರೆ.  ಕಳೆದ ಒಂದು ಗಂಟೆಗಳಿಂದಲೂ ಕಾರ್ಯಾಚರಣೆ ಮುಂದುವರಿದಿದೆ.

ಪಾಯಿಂಟ್ 1ನಲ್ಲಿ ಮೊದಲು ಅಗೆತ ಆರಂಭಿಸಲಾಗಿದೆ. ಮೂರರಿಂದ ನಾಲ್ಕು ಅಡಿ ಆಳ ಸದ್ಯ ಅಗೆಯಲಾಗುತ್ತಿದೆ. ಹೆಚ್ಚುವರಿ ಅಗೆಯುವ ಅವಶ್ಯಕತೆ ಇದ್ದರೆ ಅಗೆಸಲು ಪೊಲೀಸ್ ಅಧಿಕಾರಿಗಳು ಅಗೆಯಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮೊದಲು ತೋರಿಸಿದ ಸ್ಥಳದಲ್ಲಿ ಅಗೆತ ಪೂರ್ಣವಾಗಿದೆ ಎನ್ನಲಾಗುತ್ತಿದೆ. ಎರಡನೇ ಸ್ಥಳದಲ್ಲೂ ಅಗೆತ ಆರಂಭಿಸಲಾಗಿದೆ. ಅಗೆಯುತ್ತಿರುವ ಸ್ಥಳದಲ್ಲಿ ದಟ್ಟವಾದ ಕಾಡು ಆವರಿಸಿದ್ದು, ಪೊದೆಯೊಂದರ ಹಿಂಬದಿಯಲ್ಲಿ ಉತ್ಖನನ  ನಡೆಸಲಾಗ್ತಿದೆ.  ಸ್ಥಳದಲ್ಲಿ ಟರ್ಪಾಲ್ ಗಳನ್ನು ಬಳಸಲಾಗಿದೆ.

ಸ್ಥಳದಲ್ಲಿ ಎಸ್ ಐಟಿ, ಎಸ್ ಒಸಿಒ, ಎಫ್ ಎಸ್ ಎಲ್ ಅಧಿಕಾರಿಗಳಿದ್ದು, ಎಸಿಯವರ ಸಮ್ಮುಖದಲ್ಲಿ ಶವ ಉತ್ಖನನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version