ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು: ವಕೀಲ ದೇವರಾಜೇಗೌಡ ವಿರುದ್ಧ ಡಿಕೆಶಿ ಕಿಡಿ

dk shivakumar
18/05/2024

ಬೆಂಗಳೂರು: ದೇವರಾಜೇಗೌಡ ಏನು ಬೇಕಾದರೂ ಮಾತನಾಡಿಕೊಳ್ಳಲಿ. ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ​ಡ್ರೈವ್ ಪ್ರಕರಣ ಪ್ರಕರಣಕ್ಕೆ  ಸಂಬಂಧಿಸಿದಂತೆ ಎಸ್ ​ಐಟಿ ವಶದಲ್ಲಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಡಿ.ಕೆ.ಶಿವಕುಮಾರ್ ಅವರ ಕೈವಾಡ ಈ ಪ್ರಕರಣದಲ್ಲಿದೆ ಎಂದು ಆರೋಪಿಸಿದ್ದು, ಈ ಆರೋಪದ ವಿರುದ್ಧ ಡಿಕೆಶಿ ಕಿಡಿಕಾರಿದರು.

ನಾನು ದೇವರಾಜೇಗೌಡ ಜತೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪಕ್ಷ ಅಂದ ಮೇಲೆ ಸಾವಿರಾರು ಜನ ಭೇಟಿಯಾಗಿ ಹೋಗುತ್ತಾರೆ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೆ ಗೊತ್ತು ,  ಆರೋಪ ಮಾಡಬೇಕು ಮಾಡುತ್ತಾರೆ. ಏನೇನೊ ಆಗುತ್ತೆ ನೀವು ದೊಡ್ಡದಾಗಿ ಮಾಡುತ್ತಿದ್ದೀರಿ. ಮಾಧ್ಯಮಗಳಿಗೆ ನಿಮ್ಮದೇ ಆದ ಇಮೇಜ್ ಇದೆ. ಮುಖಪುಟದಲ್ಲಿ ನ್ಯೂಸ್ ಕೂಡ ಆಗಿದೆ. ಅವರ ಬಗ್ಗೆ ಅಲ್ಲ, ನಿಮ್ಮ ಬಗ್ಗೆ ಬೇಜಾರ್​​ ಆಗುತ್ತಿದೆ  ಎಂದು ಮಾಧ್ಯಮಗಳ ವಿರುದ್ಧ ಬೇಸರ ಹೊರ ಹಾಕಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version