1:26 AM Thursday 15 - January 2026

ದೂಧ್ ಸಾಗರಕ್ಕೆ ಹೋಗುವ ಮುಂಚೆ ಎಚ್ಚರ.. ಎಚ್ಚರ: ಪೊಲೀಸರು ಬಸ್ಕಿ ಹೊಡೆಸಿ ಕಳುಹಿಸಿದ್ದು ನಿಜನಾ..?

16/07/2023

ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಇರುವ ಗಡಿ ಭಾಗದ ಮನಮೋಹಕ ದೂಧ್‌ ಸಾಗರ್‌ ಜಲಪಾತ ಚಾರಣಕ್ಕೆ ತೆರಳುವ ಮುಂಚೆ ಸ್ಪಲ್ಪ ಹುಷಾರಾಗಿರಬೇಕು. ಯಾಕೆಂದರೆ ಇಂದಿನಿಂದ ದೂಧ್‌ ಸಾಗರ್‌ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಭಾರೀ ಮಳೆಯ ಕಾರಣಕ್ಕಾಗಿ ಗೋವಾ ಸರಕಾರ ನಿರ್ಬಂಧ ಹೇರಿದ ಹೊರತಾಗಿಯೂ ಭಾನುವಾರ ಭಾರಿ ಸಂಖ್ಯೆಯ ಪ್ರವಾಸಿಗರು ಹೋಗಿರುವ ವಿಡಿಯೋ ವೈರಲ್ ಆಗಿದೆ.

ಆದರೆ ಇಲ್ಲಿಗೆ ಈಗಾಗಲೇ ಪ್ರವೇಶವನ್ನು ನಿರಾಕರಿಸಿ ಆದೇಶಿಸಲಾಗಿದ್ದು, ಈ ವಿಷಯ ಗೊತ್ತಿಲ್ಲದೆ ಟ್ರಕ್ಕಿಂಗ್‌ ಗೆ ಹೋಗಿದ್ದ ರಾಜ್ಯದ ಯುವಕರಿಗೆ ಗೋವಾ ಪೊಲೀಸರು ಬಸ್ಕಿ ಹೊಡೆಸಿ ಕಳುಹಿಸಿದ್ದಾರೆ ಎನ್ನಲಾದ ವಿಡಿಯೋ ಈಗ ವೈರಲ್‌ ಆಗಿದೆ.

ಪ್ರವೇಶಾತಿ ನಿಬಂಧನೆ ಇದ್ದರೂ ಅಕ್ರಮವಾಗಿ ಪ್ರವೇಶ ಮಾಡಿದ್ದರಿಂದ ರೈಲ್ವೆ ಹಾಗೂ ಗೋವಾ ಪೊಲೀಸರು ಈ ಯುವಕರಿಗೆ ಬಸ್ಕಿ ಹೊಡೆಯುವ ಶಿಕ್ಷೆಯನ್ನು ವಿಧಿಸಿದ್ದಾರೆ.

ದೂಧ್ ‌ಸಾಗರ್‌ ಜಲಪಾತ ವೀಕ್ಷಣೆ ಹಾಗೂ ಟ್ರಕ್ಕಿಂಗ್‌ ಗೆ ಭಾನುವಾರದಿಂದ ನಿಷೇಧ ಹೇರಿ ಗೋವಾ ಸರ್ಕಾರ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೇ 50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ರೈಲ್ವೇ ಪೊಲೀಸ್‌ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿತ್ತು. ಇವರು ಇಲ್ಲಿ ಪಹರೆ ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಯಾರೂ ಸಹ ಅತ್ತ ಸುಳಿಯದಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧೆಡೆಯಿಂದ ಗೋವಾ ಗಡಿಯ ಮೂಲಕ ರೈಲ್ವೇ ಹಳಿಯ ಮೇಲೆ ನಡೆದುಕೊಂಡು ಬಂದಿದ್ದ ನೂರಾರು ಯುವಕರನ್ನು ಮಾರ್ಗ ಮಧ್ಯದಲ್ಲೇ ತಡೆದು ಪೊಲೀಸರು ಬಸ್ಕಿ ಹೊಡೆಸಿ ವಾಪಾಸ್ ಕಳುಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version