ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಚುನಾವಣಾ ಜಾಗೃತಿ

abvp
09/05/2023

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಜಿಲ್ಲೆಯ ವತಿಯಿಂದ ವಿಧಾನಸಭೆ ಚುನವಣೆಯ ಜಾಗೃತಿಗಾಗಿ ಕಾರ್ಕಳದ ವಿವಿಧ ಪ್ರಮುಖ ರಸ್ತೆಗಳಲ್ಲಿ 100% ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಹಿ ಸಂಗ್ರಹ ಅಭಿಯಾನ ಮತ್ತು ನಗರದ ವಿವಿಧ ಕಾಲೇಜುಗಳಲ್ಲಿ ಮತದಾನದ  ಜಾಗೃತಿ ಮತ್ತು ಸಹಿ ಸಂಗ್ರಹ ಅಭಿಯಾನ ಮತ್ತು ಕರಪತ್ರವನ್ನು ಹಂಚಲಾಯಿತು.

ವಿದ್ಯಾರ್ಥಿಗಳಿಂದ ನಮ್ಮ ಹಕ್ಕು, ನಮ್ಮ ಮತ. ನಮ್ಮ ಮತ, ನಮ್ಮ ಭವಿಷ್ಯ. ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಹತ್ತು ಹಲವಾರು ಘೋಷಣೆಗಳನ್ನು ಕೂಗುತ್ತ ಸಮಾಜಕ್ಕೆ ಮತದಾನ ಚಲಾಯಿಸುವಂತೆ  ಎಚ್ಚರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಹಿರಿಯ ಕಾರ್ಯಕರ್ತರದ ಶಶಾಂಕ್ ಶ್ರೀವತಾಯ, ಶೀತಲ್ ಕುಮಾರ್ ಜೈನ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ವಿಭಾಗ ಸೇವಾ ಪ್ರಮುಖ ಆಶಿಶ್ ಶೆಟ್ಟಿ ಬೋಳ, ಜಿಲ್ಲಾ ಸಂಚಲಕ್ ಯುಕೇಶ್, ಶಿವರುದ್ರ ಪಾಟೀಲ್, ಶ್ರೇಯಸ್ ಮತ್ತಿತರು ಉಪಸ್ಥಿತರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version