1:20 AM Thursday 15 - January 2026

ಭಾವಿ ಪತಿಯನ್ನೇ ಅರೆಸ್ಟ್ ಮಾಡಿದ ಮಹಿಳಾ ಸಬ್ ಇನ್ಸ್ ಪೆಕ್ಟರ್!

junmoni rabha
06/05/2022

ಡಿಸ್ಪುರ್: ಮಹಿಳಾ ಸಬ್ ಇನ್ಸ್ ಪೆಕ್ಟರ್ ವೊಬ್ಬರು ತನ್ನು ಭಾವಿ ಪತಿಯನ್ನೇ ವಂಚನೆಯ ಕೇಸ್ ನಲ್ಲಿ ಬಂಧಿಸಿದ ಸಿನಿಮೀಯ ಶೈಲಿಯ ಘಟನೆ ಅಸ್ಸಾಂ ನಲ್ಲಿ ನಡೆದಿದೆ.

ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಜುನ್ಮೋನಿ ರಾಭಾ ಎಂಬವರು ಈ ಕಥೆಯ ರಿಯಲ್  ನಾಯಕಿಯಾಗಿದ್ದಾರೆ. ರಾಭಾ ಅವರಿಗೆ ಇತ್ತೀಚೆಗೆ ರಾಣಾ ಪೊಗಾಗ್ ಎಂಬಾತನ ಜೊತೆಗೆ ವಿವಾಹ ನಿಶ್ಚಯವಾಗಿತ್ತು. ನವೆಂಬರ್ ನಲ್ಲಿ ಮದುವೆಯಾಗಲು ಕೂಡ ಸಿದ್ಧತೆಗಳು ನಡೆದಿತ್ತು.

ತಾನೊಬ್ಬ ಸಾರ್ವಜನಿಕ ಸಂಪರ್ಕಾಧಿಕಾರಿ ಎಂದು ಜುನ್ಮೋನಿ ರಾಭಾ ಹಾಗೂ ಕುಟುಂಬಸ್ಥರನ್ನು ರಾಣಾ ನಂಬಿಸುವಲ್ಲಿ ಯಶಸ್ವಿಯಾಗಿದ್ದ. ಹೀಗಾಗಿ ಕಳೆದ ಅಕ್ಟೋಬರ್ ನಲ್ಲಿ ಇವರಿಬ್ಬರ  ನಿಶ್ಚಿತಾರ್ಥ ಕೂಡ ನಡೆದು ಹೋಗಿತ್ತು.

ಈ ನಡುವೆ ರಾಣಾ ಪೊಗಾಗ್ ಒಬ್ಬ ನಯವಂಚಕ,  ಆತನ ತಾನು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ, ಕೆಲಸದ ಭರವಸೆ ನೀಡಿ ಸಾಕಷ್ಟು ಜನರನ್ನು ವಂಚಿಸಿದ್ದಾನೆ ಎನ್ನುವ ಮಾಹಿತಿಯನ್ನು ಕೆಲವರು ರಾಭಾ ಕಿವಿಗೆ ಹಾಕಿದ್ದಾರೆ.

ಈ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಭಾ ಈತನ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಈತನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.  ವಿಚಾರಣೆಯ ವೇಳೆ ರಾಣಾ ಪೊಗಾಗ್ ವಂಚನೆಯ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿರುವ ಮಾಹಿತಿ ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮದ್ಯ ಪ್ರಿಯರಿಗೆ ಶಾಕ್:  ಮೇ 19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ

ಹೊಟೇಲ್ ನಿಂದ ಖರೀದಿಸಿದ ಆಹಾರದಲ್ಲಿ ಹಾವಿನ ಚರ್ಮ ಪತ್ತೆ!

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ: ಇಬ್ಬರ ದಾರುಣ ಸಾವು

ಸೆಖೆಯಿಂದ ತಪ್ಪಿಸಿಕೊಳ್ಳಲು ಆಟೋದ ಮೇಲೆಯೇ ಗಿಡ ನೆಟ್ಟ ಆಟೋ ಚಾಲಕ

ಕೆಜಿಎಫ್ 2 ಅಬ್ಬರಕ್ಕೆ ದಂಗಲ್ ಟೀಮ್ ಕಂಗಾಲ್! | ದಾಖಲೆ ಪುಡಿಗಟ್ಟಿದ ಸುಲ್ತಾನ

ಇತ್ತೀಚಿನ ಸುದ್ದಿ

Exit mobile version