ಸೈಬರ್ ದಾಳಿಯಿಂದ ಬೇಸತ್ತು ತೃತೀಯ ಲಿಂಗಿ ಬಾಡಿಬಿಲ್ಡರ್ ಪ್ರವೀಣ್ ನಾಥ್ ಆತ್ಮಹತ್ಯೆ: ಸಂಗಾತಿ ರಿಶಾನಾ ಆಯೆಶಾ ಸ್ಥಿತಿ ಗಂಭೀರ
ಸೈಬರ್ ದಾಳಿಯಿಂದ ಬೇಸತ್ತು ಕೇರಳದ ಮೊದಲ ತೃತೀಯ ಲಿಂಗಿ ಬಾಡಿಬಿಲ್ಡರ್ ಪ್ರವೀಣ್ ನಾಥ್ ಆತ್ಮಹತ್ಯೆಗೆ ಶರಣಾಗಿದ್ದು, ಇದರ ಬೆನ್ನಲ್ಲೇ ಅವರ ಜೊತೆಗಾಗಿ ರಿಶಾನಾ ಆಯೆಶಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಪ್ರವೀಣ್ ನಾಥ್ ಅವರು ರಿಶಾನ್ ಅವರನ್ನು ಫೆಬ್ರವರಿ 14ರ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ವಿರುದ್ಧ ಸಿಕ್ಕಿ ಸಿಕ್ಕಿದಂತೆ ಕಾಮೆಂಟ್ ಗಳು, ಪೋಸ್ಟ್ ಗಳು ಬರತೊಡಗಿತ್ತು. ಇದರಿಂದ ಬೇಸತ್ತು, ಜೋಡಿಯೂ ಸೋಷಿಯಲ್ ಮೀಡಿಯಾದಿಂದಲೇ ಹೊರ ಬಂದಿದ್ದರು.
ಇನ್ನೂ ಈ ಜೋಡಿ ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಬಗ್ಗೆ ಒಂದು ಪೋಸ್ಟರ್ ಹರಿದಾಡುತ್ತಿತ್ತು. ಇದರಿಂದಾಗಿ ತಾನು ಭಾವನಾತ್ಮಕವಾಗಿ ಕುಸಿದು ಹೋಗಿರುವುದಾಗಿ ಪ್ರವೀಣ್ ನಾಥ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ 2 ದಿನಗಳ ಮೊದಲು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























