4:16 AM Monday 15 - September 2025

ಬೀಚ್ ಗೆ ತೆರಳಿದ್ದ ವಿದ್ಯಾರ್ಥಿನಿಯರು ನೀರುಪಾಲು: ಓರ್ವ ಯುವತಿ ಸಾವು

death news
20/10/2023

ರಜೆಯ ಹಿನ್ನೆಲೆಯಲ್ಲಿ ಬೀಚ್ ಗೆ ತೆರಳಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿದ್ದು, ವಿಟ್ಲ ಮೂಲದ ಓರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆಯು ಮಂಗಳೂರಿನ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿನಿಯನ್ನು ನಿಶಾ (15) ಎಂದು ಗುರುತಿಸಲಾಗಿದ್ದು, ಈಕೆ ಮೂಲತಃ ನೇಪಾಳ ನಿವಾಸಿಯಾಗಿದ್ದು, ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಳು.

ವಿಟ್ಲ ಮೂಲದ ದಿಗಂತ (15), ದಿವ್ಯರಾಜ್ (15), ತೇಜಸ್ (14), ಕೀರ್ತನ್ (16), ಅಶ್ಮಿತಾ (15), ನಿಶಾ (15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ಗೆ ನೀರಲ್ಲಿ ಆಟ ಆಡಲು ತೆರಳಿದಾಗ ನೀರಿನ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದು, ಇವರನ್ನು ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದು, ನಾಲ್ಕು ಜನ ಆರೋಗ್ಯವಾಗಿದ್ದಾರೆ.

ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ನಿಶಾ ಮತ್ತು ಅಶ್ವಿತಾ ನೇಪಾಳ ಮೂಲದವರಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version