6:59 PM Wednesday 15 - October 2025

ಫ್ಲ್ಯಾಟ್ ಗೆ ನುಗ್ಗಿ ಯುವತಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ: 15 ಲಕ್ಷ ರೂಪಾಯಿ ಕಳವು

kolkatta
07/07/2021

ಕೋಲ್ಕತ್ತಾ: ಫ್ಲ್ಯಾಟ್ ಗೆ ನುಗ್ಗಿದ ಗ್ಯಾಂಗ್ ವೊಂದು ಯುವತಿಯೋರ್ವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ 15 ಲಕ್ಷ ರೂಪಾಯಿ ದೋಚಿದ ಘಟನೆ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ನಡೆದಿದೆ.

ಯುವತಿ ಒಬ್ಬಳೇ ಫ್ಲ್ಯಾಟ್ ನಲ್ಲಿದ್ದ ವೇಳೆ ಮೂವರು ಅಪರಿಚಿತರು ಫ್ಲ್ಯಾನ್ ಗೆ ನುಗ್ಗಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿ, ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಬಳಿಕ ಫ್ಲ್ಯಾಟ್ ನೊಳಗೆ ಜಾಲಾಡಿ 15 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ಸಿಸಿ ಟಿವಿ ದೃಶ್ಯಾವಳಿಗಳನ್ನು  ಸಂಗ್ರಹಿಸುತ್ತಿದ್ದಾರೆ.  ಫ್ಲ್ಯಾಟ್ ನೊಳಗೆ ಆರೋಪಿಗಳು ಹೇಗೆ ಪ್ರವೇಶಿಸಿದರು ಎನ್ನುವ ವಿಚಾರಕ್ಕೆ ಪೊಲೀಸರು ಒತ್ತು ನೀಡಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version