4:41 AM Wednesday 22 - October 2025

ಬಾಸ್ಕೆಟ್ ನಲ್ಲಿ ಪತ್ತೆಯಾಯಿತು ರಾಕೂನ್ ತಳಿಯ ನಾಯಿ: ಥೈಲ್ಯಾಂಡ್ ನಿಂದ ಬಂದವನಿಗೆ ಎದುರಾಯ್ತು ಸಂಕಷ್ಟ

rakoon dog 1
08/08/2023

ಥೈಲ್ಯಾಂಡ್ ನಿಂದ ವಿಮಾನದಲ್ಲಿ ಅಕ್ರಮವಾಗಿ ತರಲಾಗಿದ್ದ ಎರಡು ರಾಕೂನ್ ತಳಿಯ ನಾಯಿಗಳನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅದಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೇ ನಾಯಿಗಳನ್ನು ತಂದ ಆರೋಪಿಗೆ 80 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಥಾಯ್ ಏರ್ ವೇಸ್ ವಿಮಾನದಲ್ಲಿ ಬಂದಿಳಿದ ಚೆನ್ನೈ ಮೂಲದ ಆರೋಪಿ ಬಾಸ್ಕೆಟ್ ನಲ್ಲಿ ನಾಯಿ ಮರಿಗಳನ್ನು ಬಚ್ಚಿಟ್ಟಿದ್ದ. ತಪಾಸಣೆ ವೇಳೆ ಒಂದು ಮರಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇನ್ನೊಂದು ಮರಿಯನ್ನು ಮರಳಿ ಥಾಯ್ಲೆಂಡ್ ಗೆ ಕಳುಹಿಸಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮೈತುಂಬಾ ರೋಮಗಳಿರುವ ರಾಕೂನ್ ತಳಿಯ ನಾಯಿಗಳು ನೋಡಲು ನರಿಗಳಂತೆ ಕಾಣಿಸುತ್ತವೆ. ಪ್ರಾಣಿ ಸಾಗಣೆ ಕುರಿತು ಆತ ಯಾವುದೇ ದಾಖಲೆ ನೀಡದ ಕಾರಣ ಆತನ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4-5 ಗಂಟೆಗಳ ಪ್ರಯಾಣವಾಗಿದ್ದರಿಂದ 1 ನಾಯಿ ಮರಿ ಮೃತಪಟ್ಟಿದೆ. ಥೈಲ್ಯಾಂಡ್ ಇಲಾಖೆ ನೆರವು ಪಡೆದು ಮತ್ತೊಂದು ನಾಯಿ ಮರಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಆರೋಪಿ ಚೆನ್ನೈಯಲ್ಲಿ ವನ್ಯಜೀವಿ ಅಕ್ರಮವಾಗಿ ಸಾಗಿಸಿ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version