ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ: ಆಸ್ಪತ್ರೆಗೆ ದಾಖಲು

sanjeeva matandoor
17/11/2023

ಪುತ್ತೂರು:  ಪುತ್ತೂರು ತಾಲೂಕಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ವಿಷ ಜಂತುವೊಂದು ಕಚ್ಚಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವೆಂಬರ್‌ 16ರಂದು ಅವರಿಗೆ  ವಿಷದ ಹಾವು ಕಚ್ಚಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ  ಐಸಿಯುನಲ್ಲಿ ಚಿಕಿತ್ಸೆ  ನೀಡಲಾಗಿತ್ತು. ಇಂದು ಬೆಳಗ್ಗೆ ವಾರ್ಡ್‌ ಗೆ ಶಿಫ್ಟ್‌ ಮಾಡಿದ್ದಾರೆ.

ಇಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಆಸ್ಪತ್ರೆಗೆ ಭೇಟಿ ನೀಡಿ ಸಂಜೀವ ಮಠಂದೂರು ಅವರ ಆರೋಗ್ಯ ವಿಚಾರಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version