ಭೀಕರ ಮೇಘಸ್ಫೋಟಕ್ಕೆ  ಬೆಚ್ಚಿಬಿದ್ದ ಉತ್ತರಾಖಂಡ: ಮಣ್ಣಿನಡಿ ಸಿಲುಕಿದ ಸುಂದರ ಗ್ರಾಮ

uttarakhand horror
05/08/2025

Uttarakhand Horror–ಉತ್ತರಾಖಂಡ: ಭೀಕರ ಮೇಘಸ್ಫೋಟಕ್ಕೆ  ಉತ್ತರಾಖಂಡದ ಧರಾಲಿ ಗ್ರಾಮವೇ ನಾಶವಾಗಿದೆ. ಭೀಕರ ಪ್ರವಾಹಕ್ಕೆ ಸುಂದರ ರಮಣೀಯವಾಗಿದ್ದ ಗ್ರಾಮವೇ ಮಣ್ಣಿನಡಿಗೆ ಸಿಲುಕಿದೆ.

ಮಧ್ಯಾಹ್ನ 1:45ರ ಸುಮಾರಿಗೆ ಈ ಘಟನೆ ನಡೆದಿದೆ. ಖೀರ್ ಗಂಗಾ ನದಿ ಪ್ರದೇಶದಿಂದ ಮೇಘ ಸ್ಫೋಟಗೊಂಡು ಉತ್ತರಕಾಶಿ ಜಿಲ್ಲೆಯ ಗ್ರಾಮಕ್ಕೆ ಏಕಾಏಕಿ ಭಾರೀ ಪ್ರಮಾಣದ ಪ್ರವಾಹ ನುಗ್ಗಿದೆ. ಪ್ರವಾಹದ ತೀವ್ರತೆಗೆ ಅನೇಕ ಹೊಟೇಲ್ ಗಳು, ರಸ್ಟೋರೆಂಟ್ ಗಳು, ಹೋಮ್ ಸ್ಟೇ. ಮನೆಗಳು, ಕಟ್ಟಡಗಳು, ಮರಗಳು ಕೊಚ್ಚಿ ಹೋಗಿವೆ.

ಬೆಟ್ಟದ ಎರಡು ವಿಭಿನ್ನ ಬದಿಗಳಲ್ಲಿ ಹರಿದ ಪ್ರವಾಹ ಧರಾಲಿ ಕಡೆಗೆ ಒಂದು ಮತ್ತೊಂದು ಸುಕ್ಕಿ ಗ್ರಾಮದ ಕಡೆಗೆ ನುಗ್ಗಿತ್ತು ಎಂದು  ರಾಜ್ಯ ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ. ಸದ್ಯ ಭಾರತೀಯ ಸೇನೆ ಹಾಗೂ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ  ಆರಂಭಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version