ಗಾಂಜಾ ಕೇಸ್: ಮಲಯಾಳಂನ ಇಬ್ಬರು ಖ್ಯಾತ ನಿರ್ದೇಶಕರ ಬಂಧನ

ಕೊಚ್ಚಿ: ಮಾದಕ ವಸ್ತು ಇಟ್ಟುಕೊಂಡಿರುವ ಆರೋಪದ ಹಿನ್ನೆಲೆ ಇಬ್ಬರು ಸಿನಿಮಾ ನಿರ್ದೇಶಕರನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.
ಖಾಲೀದ್ ರೆಹಮಾನ್ ಹಾಗೂ ಆಶ್ರಫ್ ಹಮ್ಜಾ ಬಂಧಿತ ಆರೋಪಿಗಳಾಗಿದ್ದಾರೆ. ಇಂದು ಬೆಳಗ್ಗಿನ ಜಾವ 2:30ರ ಸುಮಾರಿಗೆ ಆರೋಪಿಗಳನ್ನ ಬಂಧಿಸಲಾಗಿದೆ.
ಗೌಪ್ಯ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಆಲಪ್ಪುಳ ಜಿಮ್ಖಾನಾ ಮತ್ತು ತಲ್ಲುಮಾಲಾದಂತಹ ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಮಂಜುಮಲ್ ಬಾಯ್ಸ್ ಚಿತ್ರದಲ್ಲಿ ನಟಿಸಿದ್ದ ರೆಹಮಾನ್, ತಮಾಶಾ, ಭೀಮಂತೆ ವಾಝಿ ಮತ್ತು ಸುಲೈಖಾ ಮಂಜಿಲ್ ಚಿತ್ರದ ನಿರ್ದೇಶಕ ಹಮ್ಜಾ ಮನೆಗಳ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದ್ದು, ನಂತಹ ಇಬ್ಬರು ನಿರ್ದೇಶಕರು ಸೇರಿ ಹಲವರನ್ನು ಬಂಧನಕ್ಕೊಳಪಡಿಸಲಿದ್ದಾರೆಂದು ತಿಳಿದುಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ, ಕೊಚ್ಚಿಯ ಗೋರ್ಸಿ ಬ್ರಿಡ್ಜ್ ಮೇಲೆ ದಾಳಿ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದ ಬಳಿಕ ಆರೋಪಿಗಳನ್ನ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ರೆಹಮಾನ್ ಮತ್ತು ಹಮ್ಜಾ ನಿಯಮಿತ ಮಾದಕ ದ್ರವ್ಯ ಬಳಕೆದಾರರು ಎಂದು ಅಬಕಾರಿ ಇಲಾಖೆ ದೃಢಪಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD