ಜಿಯೋಬ್ಲಾಕ್ ರಾಕ್ ಓವರ್ ನೈಟ್ ಫಂಡ್ ಜತೆಗೆ ಸೇವಿಂಗ್ಸ್ ಪ್ರೊ ಸಂಯೋಜನೆ, ಡಿಜಿಟಲ್ ಹೂಡಿಕೆ ವೃದ್ಧಿಗೆ ಅನುಕೂಲ
ಮುಂಬೈ: ಜಿಯೋ ಫೈನಾನ್ಷಿಯಲ್ ಸರ್ವೀಸ್ ಲಿಮಿಟೆಡ್ ಮತ್ತು ಬ್ಲಾಕ್ ರಾಕ್ ಸಂಸ್ಥೆಯ ಜಂಟಿ ಸಹಭಾಗಿತ್ವದ ಜಿಯೋ ಬ್ಲಾಕ್ ರಾಕ್(Jio Black Rock) ಅಸೆಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಜಿಯೋ ಬ್ಲಾಕ್ ರಾಕ್ ಓವರ್ ನೈಟ್ ಫಂಡ್ ಜತೆಗೆ “ಸೇವಿಂಗ್ಸ್ ಪ್ರೊʼ ಎಂಬ ಉಳಿತಾಯ ಮತ್ತು ಹೂಡಿಕೆಯ ವಿಶೇಷ ವೈಶಿಷ್ಟ್ಯವನ್ನು ಸಂಯೋಜಿಸಿದೆ. ಈ ಸೌಲಭ್ಯವು ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (JPBL) ಮೂಲಕ ಜಿಯೋ ಫೈನಾನ್ಸ್ ಆಪ್ ನಲ್ಲಿ ಲಭ್ಯವಿದೆ.
ಈ ಸಂಯೋಜನೆಯಿಂದಾಗಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹೆಚ್ಚುವರಿ ಹಣವನ್ನು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ಸುಲಭವಾಗಿ ಓವರ್ ನೈಟ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ಗ್ರಾಹಕರು ತಾವು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿರುವ ಉಳಿತಾಯ ಹಣವನ್ನು ಸ್ವಯಂಚಾಲಿತವಾಗಿ ಹೂಡಿಕೆ ಮಾಡಲು ‘ಆಟೋ–ಇನ್ವೆಸ್ಟ್’ ಸೌಲಭ್ಯವಿದ್ದು, ತಕ್ಷಣದ ಹೂಡಿಕೆಗೆ ‘ಒನ್–ಟೈಮ್’ ಆಯ್ಕೆಯೂ ಇದೆ. ಗ್ರಾಹಕರು ₹5,000 ರಿಂದ ₹1,50,000 ರವರೆಗೆ ತಮ್ಮ ಮಿತಿಯನ್ನು ನಿಗದಿಪಡಿಸಿಕೊಳ್ಳಬಹುದು ಮತ್ತು ದಿನಕ್ಕೆ ಗರಿಷ್ಠ ₹1,50,000 ರವರೆಗೆ ಹೂಡಿಕೆ ಮಾಡಬಹುದು.
ಗ್ರಾಹಕರು ಹೂಡಿಕೆ ಮಾಡಿದ ಮೊತ್ತದಲ್ಲಿ ಗರಿಷ್ಠ ₹50,000 ಅಥವಾ ಶೇ. 90 ರಷ್ಟು ಹಣವನ್ನು ತಕ್ಷಣವೇ (Instant) ಹಿಂಪಡೆಯಬಹುದು. ಈ ಮಿತಿಗಿಂತ ಹೆಚ್ಚಿನ ಮೊತ್ತಕ್ಕೆ T+1 ದಿನದ ಆಧಾರದ ಮೇಲೆ ಹಣ ಹಿಂಪಡೆಯುವ ಅವಕಾಶವಿದೆ. ಈ ಯೋಜನೆಗೆ ಯಾವುದೇ ಎಂಟ್ರಿ ಅಥವಾ ಎಕ್ಸಿಟ್ ಲೋಡ್, ಲಾಕ್–ಇನ್ ಅವಧಿ ಅಥವಾ ಗುಪ್ತ ಶುಲ್ಕಗಳು ಇರುವುದಿಲ್ಲ.
ಜಿಯೋಬ್ಲ್ಯಾಕ್ ರಾಕ್ ನ ಸಿಇಒ ಸಿಡ್ ಸಿದ್ದಾರ್ಥ್ ಸ್ವಾಮಿನಾಥನ್ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ನ ಸಿಇಒ ವಿನೋದ್ ಈಶ್ವರನ್ ಅವರು, ಇದು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಕರ್ಯದೊಂದಿಗೆ ಹೆಚ್ಚುವರಿ ಹಣವನ್ನು ಸುಲಭವಾಗಿ ನಿರ್ವಹಿಸಲು ಉತ್ತಮ ನಮ್ಯತೆ ನೀಡುತ್ತದೆ ಎಂದು ತಿಳಿಸಿದ್ದಾರೆ. ಈ ಸೌಲಭ್ಯವು ಜಿಯೋ ಪೇಮೆಂಟ್ಸ್ ಬ್ಯಾಂಕ್ ನ ಉಳಿತಾಯ ಮತ್ತು ಸಂಬಳ ಖಾತೆದಾರರಿಗೆ ಲಭ್ಯವಿದ್ದು, ಜಿಯೋ ಫೈನಾನ್ಸ್ ಆಪ್ ನಲ್ಲಿ ಆಧಾರ್ ಮತ್ತು ವಿಡಿಯೋ ಕೆವೈಸಿ ಮೂಲಕ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























