4:54 AM Wednesday 20 - August 2025

ಗುಜರಾತ್ ನಲ್ಲಿ ಬಿಜೆಪಿ ಗೆಲುವು: ಬಿಜೆಪಿ ನಾಯಕರ ವರ್ತನೆಗೆ ಇದೆಂತಾ ವಿಚಿತ್ರ? ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್

dinesh gundu rao
08/12/2022

ಕೇವಲ ಗುಜರಾತ್ ವಿಧಾನಸಭಾ ಚುನಾವಣೆಯ ಗೆಲುವನ್ನೇ ದೇಶದ ಗೆಲುವು ಎಂಬಂತೆ BJP ನಾಯಕರು ಸಂಭ್ರಮಿಸುತ್ತಿದ್ದಾರೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದೂ ಹೀನಾಯವಾಗಿ ಸೋತಿರುವುದನ್ನು ಮರೆಮಾಚುತ್ತಿರುವದೇಕೆ..?  ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದ ಬಿಜೆಪಿಯವರು ಹಿಮಾಚಲ‌ ಪ್ರದೇಶದ ಫಲಿತಾಂಶದ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಗುಜರಾತ್ ಚುನಾವಣೆಯ ಫಲಿತಾಂಶ ನಿರೀಕ್ಷೀತ. ಪ್ರಧಾನಿ ಮೋದಿ ಗುಜರಾತ್‌ನವರು. ಗುಜರಾತ್‌ನಲ್ಲಿ ಸೋತರೆ ತಮಗೆ ಮುಖಭಂಗ ಎನ್ನುವ ಕಾರಣಕ್ಕೆ ಚುನಾವಣಾ ಪೂರ್ವದಲ್ಲಿ ಮೋದಿಯವರು ತಮ್ಮ ತವರು ರಾಜ್ಯಕ್ಕೆ ವಿಪರೀತ ಕೊಡುಗೆ ನೀಡಿದ್ದರು. ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲಲು ಇದು ಕೂಡ ಪ್ರಮುಖ ಕಾರಣ. ಜೊತೆಗೆ AAP ಸ್ಪರ್ಧೆಯಿಂದ BJPಗೆ ಅನುಕೂಲವಾಗಿದೆ.

ಗುಜರಾತ್ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ದಿಕ್ಸೂಚಿ ಎಂದು BJPಯವರ ವಾದ. ಹಾಗಾದರೆ ಹಿಮಾಚಲ ಪ್ರದೇಶದ ಫಲಿತಾಂಶ ದಿಕ್ಸೂಚಿಯಲ್ಲವೇ.? ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ದಿಕ್ಸೂಚಿಯಲ್ಲವೇ.? ಒಡಿಶಾ,ರಾಜಸ್ಥಾನ, ಉ.ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ BJPಯ ಸೋಲು ದಿಕ್ಸೂಚಿಯಲ್ಲವೇ? ಎಂದು ಅವರು ಪ್ರಶ್ನಿಸಿದರು.

ಗುಜರಾತ್ ಹೊರತುಪಡಿಸಿ BJPಯ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎನ್ನುವುದಕ್ಕೆ ಹಿಮಾಚಲ ಪ್ರದೇಶ, ದೆಹಲಿ ಮಹಾನಗರ ಪಾಲಿಕೆ, ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಆದರೂ ಬಿಜೆಪಿಯವರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಗುಜರಾತ್ ಗೆಲುವೊಂದನ್ನೇ ಸಂಭ್ರಮಿಸುತ್ತಿದ್ದಾರೆ‌. ಇದೆಂತಾ ವಿಚಿತ್ರ? ಎಂದು ಪ್ರಶ್ನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version