12:25 AM Wednesday 20 - August 2025

ಕುಸಿದಿಲ್ಲ ಹಮಾಸ್ ನ ಸಾಮರ್ಥ್ಯ: ಗಾಝಾದಲ್ಲಿ ಇಸ್ರೇಲ್ ರಿಸರ್ವ್ ಸೇನಾ ಪಡೆಯ ಕಮಾಂಡರ್ ಹತ್ಯೆ

12/11/2024

ಗಾಝಾದಲ್ಲಿ ಹಮಾಸ್ ನ ಸಾಮರ್ಥ್ಯ ಇನ್ನೂ ಕುಂದಿಲ್ಲ ಎಂಬುದನ್ನು ಸಮರ್ಥಿಸುವಂತಹ ಘಟನೆ ನಡೆದಿದೆ. ಇಸ್ರೇಲ್ ರಿಸರ್ವ್ ಸೇನಾ ಪಡೆಯ ಕಮಾಂಡರ್ ಇಟಾಮಾನ್ ಲೆವೆನ್ ಫ್ರೀಡ್ ಮ್ಯಾನ್ ನನ್ನು ಹತ್ಯೆ ಮಾಡಲಾಗಿದೆ. ಇಸ್ರೇಲ್ ಸೇನೆ ಈ ಹತ್ಯೆಯನ್ನು ದೃಢೀಕರಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ. ಇದೇ ವೇಳೆ ನಾಲ್ಕು ಮಂದಿ ಸೈನಿಕರ ಹತ್ಯೆಯೂ ನಡೆದಿದೆ ಎಂದು ವರದಿಯಾಗಿದ್ದು ಜಬಲಿಯ ಪ್ರದೇಶದಲ್ಲಿ ಇವರ ಮೇಲೆ ಹಮಾಸ್ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಗಾಝಾದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಈವರೆಗೆ 375 ಇಸ್ರೇಲಿ ಸೈನಿಕರ ಹತ್ಯೆ ನಡೆದಂತಾಗಿದೆ. ಇಸ್ರೇಲ್ ಭೂ ಅಕ್ರಮಣ ನಡೆಸಿದ ಬಳಿಕ ಸಾವಿಗೀಡಾದ ಸೈನಿಕರ ಸಂಖ್ಯೆ ಇದಾಗಿದೆ. ಇದೇ ವೇಳೆ ಪಶ್ಚಿಮ ಇಸ್ರೇಲ್ ನ ಮೇಲೆ ಹಿಝ್ಬುಲ್ಲಾ ವೈಮಾನಿಕ ದಾಳಿಯನ್ನು ಮುಂದುವರಿಸಿದೆ.

ಹೈಫ ಮತ್ತು ಅದರ ಹತ್ತಿರದ ಪ್ರದೇಶಗಳಲ್ಲಿ ಹಿಝ್ಬುಲ್ಲ ವಿಮಾನ ದಾಳಿ ಮತ್ತು ಡ್ರೋನ್ ದಾಳಿಗಳ ಮೂಲಕ ಇಸ್ರೇಲ್ ಗೆ ತಲೆನೋವನ್ನು ಮುಂದುವರಿಸಿದೆ. ಇದರಿಂದಾಗಿ ವಿಚಲಿತ ಗೊಂಡಿರುವ ಇಸ್ರೇಲ್ ಇದೀಗ ಹಿಝ್ಬುಲ್ಲ ಜೊತೆ ಶಾಂತಿ ಮಾತುಕತೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಆ ಕಾರಣಕ್ಕಾಗಿ ಚರ್ಚಿಸುವುದಕ್ಕೆ ಇಸ್ರೇಲ್ ತನ್ನ ದೂತನನ್ನು ರಷ್ಯಾಕ್ಕೆ ಕಳುಹಿಸಿಕೊಟ್ಟಿದೆ ಎಂದು ತಿಳಿದುಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version