11:35 PM Wednesday 15 - October 2025

ಹಾಸಿಗೆ ಹಿಡಿದಿದ್ದ ತಂದೆಯನ್ನು ಥಳಿಸಿ ಮನೆಯಿಂದ ಹೊರ ದಬ್ಬಿದ ಮಗ!

kumara
08/07/2021

ರಾಮನಗರ: ಆಸ್ತಿಗಾಗಿ ತಂದೆಯನ್ನೇ ಮಗ ಥಳಿಸಿ ಮನೆಯಿಂದ ಹೊರಗೆ ಹಾಕಿರುವ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಮಗ ತಂದೆಯನ್ನು ಥಳಿಸಿ ಮನೆಯಿಂದ ಹೊರದಬ್ಬುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ರಾಮನಗರ ಡಿಪೋ ಕೆಎಸ್ಸಾರ್ಟಿಸಿ ಚಾಲಕ ಕುಮಾರ ಎಂಬಾತ ತನ್ನ ತಂದೆಯನ್ನು ಥಳಿಸಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ವೈರಲ್ ಆಗಿರುವ ವಿಡಿಯೋದಲ್ಲಿ ಹಾಸಿಗೆ ಹಿಡಿದಿರುವ  ತಂದೆ ತಿಮ್ಮಯ್ಯ ಅವರನ್ನು ಮನೆಯಿಂದ ಹೊರ ದಬ್ಬಿರುವ ದೃಶ್ಯ ಕಂಡು ಬಂದಿದೆ ಎಂದು ವರದಿಯಾಗಿದೆ.

ಆಸ್ತಿ ವಿಚಾರವಾಗಿ ಕುಮಾರ ತನ್ನ ತಂದೆಯ ಮೇಲೆ ಈ ದುಷ್ಕೃತ್ಯ ಮೆರೆದಿದ್ದಾನೆ ಎಂದು ತಿಳಿದು ಬಂದಿದೆ. ಹಲವಾರು ತಿಂಗಳುಗಳಿಂದಲೂ ಮನೆಯನ್ನು ತನಗೆ ನೀಡುವಂತೆ ತನ್ನ ತಂದೆಯ ಮೇಲೆ ಒತ್ತಡ ಹಾಕುತ್ತಿದ್ದ ಎಂದು ಹೇಳಲಾಗಿದೆ.

ಮನೆಯನ್ನು ಮಗನ ಹೆಸರಿಗೆ ಮಾಡಲು ತಂದೆ ಒಪ್ಪದಿದ್ದ ವೇಳೆ ದಿನನಿತ್ಯ ತಂದೆಗೆ ಥಳಿಸಿ, ಊಟ ಕೂಡ ನೀಡದೇ ನರಳಾಡುವಂತೆ ಪುತ್ರ ಮಾಡಿದ್ದು, ಈ ಬಗ್ಗೆ ತಂದೆ ಪೊಲೀಸರಿಗೂ ದೂರು ನೀಡಿದ್ದರು ಎಂದು ಹೇಳಲಾಗಿದೆ. ಆದರೆ ಠಾಣೆಯಲ್ಲಿ ಪೊಲೀಸರು ಮಾತುಕತೆ ನಡೆಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version