2:23 PM Tuesday 16 - September 2025

ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸ್ಥಳೀಯರ ಕೈಯಲ್ಲಿ ಲಾಕ್ ಆದ!

hemanth
16/09/2025

ಚಿಕ್ಕಮಗಳೂರು:  ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಕದಿಯಲು ಯತ್ನಿಸಿದ ಸರಗಳ್ಳನನ್ನು ಸಾರ್ವಜನಿಕರು ಒಗ್ಗಟ್ಟಾಗಿ ಹಿಡಿದ ಘಟನೆ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಬೈಕಿನಲ್ಲಿ ಹೋಗುವಾಗಲೇ ರೈಡಿಂಗ್ ನಲ್ಲೇ ಕಳ್ಳ ಮಹಿಳೆ ಕುತ್ತಿಗೆಗೆ ಕೈಹಾಕಿದ್ದಾನೆ. ವಿಚಾರ ತಿಳಿದು ಸ್ಥಳೀಯರು ಒಟ್ಟಾಗುತ್ತಿದ್ದಂತೆ ಕಳ್ಳ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಶಿಲ್ಪಾ ಎಂಬ ಮಹಿಳೆಯ 30 ಗ್ರಾಂ ಚಿನ್ನವನ್ನು ಕದಿಯಲು ಕಳ್ಳ ಯತ್ನಿಸಿದ್ದಾನೆ. ಹೇಮಂತ್ ಎಂಬಾತ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈತ ಕೃತ್ಯ ನಡೆಸಿ ಪರಾರಿಯಾದ ಬೆನ್ನಲ್ಲೇ ಸ್ಥಳೀಯರು, ಪೊಲೀಸರು ಮುಂದಿನ ಊರಿಗೆ ಮಾಹಿತಿ ನೀಡಿದ್ದಾರೆ.

ಹೀಗಾಗಿ ಕುರುಕುಬಳ್ಳಿ ಗ್ರಾಮದ ಬಳಿ ಆತನನ್ನ ಸ್ಥಳೀಯರು ಹಿಡಿದಿದ್ದಾರೆ. ಸದ್ಯ ಘಟನೆ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version