ಹಿಂದೂ ಅಂತ ಹೇಳಿಕೊಳ್ತಿದ್ದಂತೆ ಹೆಂಡತಿ, ಮಕ್ಕಳ ಮುಂದೆ ಗುಂಡಿಕ್ಕಿ ಕೊಂದ್ರು!

madhusudhan
23/04/2025

ನನ್ನ ಮಗ ಹಿಂದೂ ಅಂತ ಹೇಳ್ತಿದ್ದಂತೆ ಅವನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಮ್ಮು-ಕಾಶ್ಮೀರದ ಪಹಲ್ಗಾಮ್​ ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ, ಬೆಂಗಳೂರಿನಲ್ಲಿ ನೆಲೆಸಿದ್ದ ಮಧುಸೂದನ್ ಅವರ ಚಿಕ್ಕಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಜಮ್ಮುವಿನಲ್ಲಿ ನಡೆದ ಗುಂಡಿನ ದಾಳಿ ಬಗ್ಗೆ ಅಲ್ಲೇ ಇರುವ ಕುಟುಂಬಸ್ಥರಿಂದ ಮಾಹಿತಿ ಪಡೆದ ಮಧುಸೂದನ್​ ಚಿಕ್ಕಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಪಹಲ್ಗಾಮ್​ನಲ್ಲಿ ಗುಂಡಿನ ಮಳೆ ಸುರಿಸಿದ ಭಯೋತ್ಪಾದಕರು ಅಲ್ಲೇ ಇದ್ದ ಬಸ್ ​​ಗೂ ಹತ್ತಿದ್ದಾರೆ. ಪ್ರವಾಸಿಗರಿಗೆ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಾರಂತೆ. ನೀವು ಹಿಂದುನಾ? ಮುಸ್ಲಿಂ ಅಂತ ಹೇಳಿದ್ದಾರೆ. ಮುಸ್ಲಿಂ ಅಂದ್ರು ಕೆಲವರನ್ನು ಕುರಾನ್ ಓದು ಅಂತೆಲ್ಲಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನನ್ನ ಮಗ ಮಧುಸೂದನ್​ ತಾನು ಹಿಂದೂ ಅಂತ ಹೇಳಿಕೊಳ್ತಿದ್ದಂತೆ ಆತನನ್ನು ಹೆಂಡತಿ, ಮಕ್ಕಳ ಮುಂದೆ ಗುಂಡಿಕ್ಕಿ ಕೊಂದ್ರು ಎಂದು ಅವರ ಚಿಕ್ಕಪ್ಪ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version