ಭಾರೀ ಮಳೆ—ಗಾಳಿಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ

22/04/2025

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದ ವಿದ್ಯಾ ಭಾರತಿಶಾಲೆಯ ಮೇಲ್ಛಾವಣಿ ಹಾರಿ ಹೋಗಿರುವ ದಾರುಣ ಘಟನೆ ನಡೆದಿದೆ. ವಿದ್ಯಾಭಾರತಿ ಶಾಲೆಯ ಮೆಲ್ಛಾವಣಿ ಮಳೆಗಾಳಿಗೆ ತತ್ತರಿಸಿ, ಸಿಮೆಂಟ್ ಶೀಟ್‌ ಗಳು ಮುರಿದು ಬಿದ್ದಿವೆ.

ಕಳೆದ ರಾತ್ರಿ ಸುರಿದ ತೀವ್ರ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಶಾಲಾ ಕಟ್ಟಡಕ್ಕೆ ಗಂಭೀರ ಹಾನಿಯಾಗಿದೆ. ಶಾಲೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಬೆಳಗ್ಗಿನ ಸಮಯದಲ್ಲಿ ಶಾಲೆಯ ಆವರಣದಲ್ಲಿ ಬಿದ್ದಿರುವ ಶೀಟ್‌ ಗಳು ಮತ್ತು ಹಾನಿಯಾದ ಭಾಗಗಳನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಳೆಗಾಲ ತೀವ್ರವಾಗಿ ಶುರುವಾಗಿದೆ ಎಂಬುದಕ್ಕೆ ಇದು ಒಂದು ಎಚ್ಚರಿಕೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮಲೆನಾಡಿನಲ್ಲಿ ಹಗಲಲ್ಲಿ ಬಿಸಿಲು ಹಾಗೂ ರಾತ್ರಿ ಧಾರಾಕಾರ ಮಳೆ ಎಂಬ ವಿಪರೀತ ಹವಾಮಾನ ಸ್ಥಿತಿ ಮುಂದುವರಿದಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಹತ್ವದ ಸೂಚನೆ: ಮುಂಬರುವ ದಿನಗಳಲ್ಲಿ ಮಳೆ ಇನ್ನೂ ಹೆಚ್ಚು ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ಶಾಲೆಗಳ ನಿರ್ವಹಣಾ ಸಮಿತಿ ಮತ್ತು ಆಡಳಿತ ಯಂತ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version