ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಹತ್ಯೆ

archana reddy
28/12/2021

ಆನೇಕಲ್:  ಕಾರು ಅಡ್ಡಗಟ್ಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಿಣಿ ಬಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಗಣಿ ನಿವಾಸಿ ಅರ್ಚನಾರೆಡ್ಡಿ ಹತ್ಯೆಗೀಡಾದ ಮಹಿಳೆಯಾಗಿದ್ದು, ಮೃತ ಮಹಿಳೆಯ ಎರಡನೇ ಪತಿ ಎನ್ನಲಾಗಿರುವ ನವೀನ್ ಕುಮಾರ್ ಹಾಗೂ ಆತನ ಸಹಚರರು ಹತ್ಯೆ ನಡೆಸಿದವರು ಎಂದು ಹೇಳಲಾಗಿದೆ.  ಕಳೆದ ಐದಾರು ವರ್ಷಗಳಿಂದ ನವೀನ್ ಕುಮಾರ್ ಹಾಗೂ ಅರ್ಚನಾರೆಡ್ಡಿ ಜೊತೆಯಾಗಿದ್ದರು. ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಇವರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿತ್ತು ಎನ್ನಲಾಗಿದೆ.

ಇದಾದ ಬಳಿಕ ಅರ್ಚನಾರೆಡ್ಡಿ ಜಿಗಣಿ ಬಿಟ್ಟು  ಬೆಳ್ಳಂದೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ. ಇದೀಗ ಅರ್ಚನಾ ಮತದಾನಕ್ಕೆ ಬರುವುದನ್ನು ತಿಳಿದಿದ್ದ ನವೀನ್, ಮತದಾನ ಮುಗಿಸಿ ಮಗ, ಚಾಲಕ ಹಾಗೂ ಇಬ್ಬರು ಯುವಕರ ಜೊತೆ ಬೆಳ್ಳಂಡೂರು ಕಡೆ ಹೊರಟಿದ್ದ ಅರ್ಚನಾರೆಡ್ಡಿ ಹೊಸ ರೋಡ್ ಸಿಗ್ನಲ್ ಬಳಿ ಸಿಗ್ನಲ್ ಬೀಳುತ್ತಿದ್ದಂತೆ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಈ ವೇಳೆ ಅರ್ಚನಾ ಜೊತೆಗಿದ್ದ ಕಾರು ಚಾಲಕ ಹಾಗೂ ಆಕೆಯ ಪುತ್ರ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೆಲ್ಫಿ ತೆಗೆದುಕೊಳ್ಳಲು ಬಂದ ಬೆಂಬಲಿಗನ ಮೇಲೆ ತಿರುಗಿ ಬಿದ್ದ ಡಿ.ಕೆ.ಶಿವಕುಮಾರ್

ಸನ್ನಿ ಲಿಯೋನ್ ಗೆ ಎಚ್ಚರಿಕೆ ನೀಡಿದ ಮಧ್ಯಪ್ರದೇಶದ ಗೃಹ ಸಚಿವ!

ಮಂಡಿ ನೋವಿಗೆ ನಾಟಿ ಚಿಕಿತ್ಸೆಯ ಮೊರೆ ಹೋದ ಸಿಎಂ ಬೊಮ್ಮಾಯಿ

ಡ್ರಗ್ಸ್ ನೀಡಿ ನನ್ನ ಮಗಳಿಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ:  ಮಂಗಳೂರು ಕಮಿಷನರ್ ಗೆ ದೂರು ನೀಡಿದ ತಾಯಿ

ಮತಾಂತರದ ಬಗ್ಗೆ ಶೌರ್ಯದ ಮಾತಿನ ಬಳಿಕ ಹೇಳಿಕೆ ವಾಪಸ್ ಪಡೆದ ತೇಜಸ್ವಿ ಸೂರ್ಯ

ಕೋಮು ಪ್ರಚೋದನಕಾರಿ ಭಾಷಣ ಆರೋಪ: ಹಾರಿಕಾ ಮಂಜುನಾಥ ವಿರುದ್ಧ ಎಫ್​ಐಆರ್​ ದಾಖಲು

ಇತ್ತೀಚಿನ ಸುದ್ದಿ

Exit mobile version