ವಿಲೇಜ್ ಸರ್ವೇ ತಂಡಕ್ಕೆ ಹೆಜ್ಜೇನು ದಾಳಿ: ಆಸ್ಪತ್ರೆಗೆ ದಾಖಲು

08/02/2024
ಕೊಪ್ಪ: ಟಿ.ಆರ್.ಎಸ್ ವಿಲೇಜ್ ಸರ್ವೇಗೆ ತೆರಳಿದ ತಂಡಕ್ಕೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.
ತುಳುವಿನ ಕೊಪ್ಪ ವೃತ್ತದ ಹೇರಂಭಾಪುರ ಸಮೀಪ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಕೇಂದ್ರೀಯ ತಂಡದೊಂದಿಗೆ ಸರ್ವೇ ಮಾಡಲು ಹೋಗುವಾಗ ಹೆಜ್ಜೇನುಗಳು ದಾಳಿ ಮಾಡಿವೆ.
ಸದ್ಯ ಗ್ರಾಮಾಭಿವೃದ್ದಿ ಅಧಿಕಾರಿ ವಿಘ್ನೇಶ್, ಗ್ರಾಮ ಸಹಾಯಕ ನೂತನ ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.