3:47 PM Tuesday 16 - December 2025

47 ವರ್ಷಗಳ ಬಳಿಕ ಸಂತೋಷ್ ಟ್ರೋಫಿ ಫೈನಲ್‌ ಗೆ ಕರ್ನಾಟಕ- ಫೈನಲ್ ಗೆಲ್ಲುವ ವಿಶ್ವಾಸ: ಸಚಿವ ಡಾ.ನಾರಾಯಣ ಗೌಡ

hero santhosh trophy
03/03/2023

ಬೆಂಗಳೂರು: ‘ ಹೀರೋ ಸಂತೋಷ್ ಟ್ರೋಫಿ’ ಟೂರ್ನಿಯಲ್ಲಿ 47 ವರ್ಷಗಳ ನಂತರ ಫೈನಲ್ ಪ್ರವೇಶಿಸಿರುವ ಕರ್ನಾಟಕ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.

1975-76ರಲ್ಲಿ ನಡೆದ ಟೂರ್ನಿಯಲ್ಲಿ ಕರ್ನಾಟಕ ತಂಡ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಫೈನಲ್ ಪ್ರವೇಶಿಸಿರುವ ಕರ್ನಾಟಕ ಪುಟ್ಬಾಲ್ ತಂಡ, ಮಾರ್ಚ್ 4 ರಂದು ಮೇಘಾಲಯ ವಿರುದ್ಧ ಟ್ರೋಫಿ ಗೆಲ್ಲುವ ವಿಶ್ವಾಸವಿದೆ.

1968-69 ರಲ್ಲಿ ನಡೆದ ಸಂತೋಷ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದ ಕರ್ನಾಟಕ ಪುಟ್ಬಾಲ್ ತಂಡ, ಮೇಘಾಲಯವನ್ನು ಮಣಿಸುವ 54 ವರ್ಷಗಳ ಕಾಯುವಿಕೆಯನ್ನು ದೂರವಾಗಿಸಿ ಮತ್ತೊಮ್ಮೆ ಟ್ರೋಫಿ ಗೆಲ್ಲಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಕರ್ನಾಟಕ ತಂಡಕ್ಕೆ ಶುಭ ಹಾರೈಸಿದ್ದಾರೆ‌‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version