ವಿಮಾನ ಹೈಜಾಕ್ ಯತ್ನ: ಚೂರಿ ಇರಿತಕ್ಕೊಳಗಾದರೂ ಹೋರಾಡಿ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ | ಇಸ್ರೇಲ್‌ ಪ್ರಧಾನಿಯಿಂದ ಮೆಚ್ಚುಗೆ - Mahanayaka

ವಿಮಾನ ಹೈಜಾಕ್ ಯತ್ನ: ಚೂರಿ ಇರಿತಕ್ಕೊಳಗಾದರೂ ಹೋರಾಡಿ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ | ಇಸ್ರೇಲ್‌ ಪ್ರಧಾನಿಯಿಂದ ಮೆಚ್ಚುಗೆ

captain smit machchhar
01/10/2026

ಇಸ್ರೇಲ್‌: ದುಬೈನಿಂದ ಇಸ್ರೇಲ್‌ ನ ಟೆಲ್ ಅವೀವ್‌ ಗೆ ತೆರಳುತ್ತಿದ್ದ ‘ಫ್ಲೈದುಬೈ’ (Flydubai) ವಿಮಾನದೊಳಗೆ ನಡೆದ ಭೀಕರ ಹೈಜಾಕ್ ಯತ್ನ ಹಾಗೂ ದಾಳಿಯನ್ನು ಭಾರತೀಯ ಪೈಲಟ್ ಒಬ್ಬರು ತಮ್ಮ ಪ್ರಾಣದ ಹಂಗು ತೊರೆದು ವಿಫಲಗೊಳಿಸಿದ್ದಾರೆ. ಈ ಸಾಹಸಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತೀಯ ಪೈಲಟ್ ಅನ್ನು ‘ನಿಜವಾದ ಹೀರೋ’ ಎಂದು ಕೊಂಡಾಡಿದ್ದಾರೆ. ಇದರ ಬೆನ್ನಲ್ಲೇ ಫ್ಲೈದುಬೈ ಸಂಸ್ಥೆಯು ಇಸ್ರೇಲ್ ನಡುವಿನ ಎಲ್ಲಾ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಸೆಪ್ಟೆಂಬರ್ 30 ರಂದು ದುಬೈನಿಂದ ಬೆನ್ ಗುರಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಫ್ಲೈದುಬೈ FZ1073 (ಬೋಯಿಂಗ್ 737 ಮ್ಯಾಕ್ಸ್ 8) ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನವು ಆಕಾಶದಲ್ಲಿ ಹಾರುತ್ತಿದ್ದಾಗ, ಸಹ–ಪೈಲಟ್ (ಕೋ–ಪೈಲಟ್) ಕ್ಯಾಪ್ಟನ್ ಮೇಲೆ ಹಠಾತ್ ದಾಳಿ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ವಿಮಾನವನ್ನು ಅಪಹರಿಸಿ ಪತನಗೊಳಿಸುವ (ಸ್ಯಾಟೊಟಾಜ್) ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಈ ವೇಳೆ ವಿಮಾನವು ಕೆಲವೇ ನಿಮಿಷಗಳಲ್ಲಿ 34,000 ಅಡಿಯಿಂದ ಹಠಾತ್ತನೆ ಕೆಳಮುಖವಾಗಿ ಧುಮುಕಲಾರಂಭಿಸಿತು.

ಆದಾಗ್ಯೂ, ಗಂಭೀರ ಗಾಯಗೊಂಡಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರು ಎದೆಗುಂದದೆ ದಾಳಿಕೋರ ಸಹ–ಪೈಲಟ್ ವಿರುದ್ಧ ಪ್ರತಿರೋಧ ಒಡ್ಡಿದರು. ಹೇಗಾದರೂ ಮಾಡಿ ಕಾಕ್‌ ಪಿಟ್ ಬಾಗಿಲು ತೆರೆದ ಅವರು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ನೆರವಾದರು. ತಕ್ಷಣ ಎಚ್ಚೆತ್ತ ಪ್ರಯಾಣಿಕರು ಹಾಗೂ ವಿಮಾನದಲ್ಲಿದ್ದ ಇತರರು ಆಕ್ರಮಣಕಾರನನ್ನು ನಿಯಂತ್ರಣಕ್ಕೆ ತಂದರು. ಬಳಿಕ ವಿಮಾನದಲ್ಲಿದ್ದ ಇತರ ಪೈಲಟ್‌ ಗಳು ಸೌದಿ ಅರೇಬಿಯಾದ ತಬುಕ್ (Tabuk) ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿದರು. ವಿಮಾನದಲ್ಲಿದ್ದ ಒಟ್ಟು 174 ಪ್ರಯಾಣಿಕರ ಪ್ರಾಣವನ್ನು ಈ ಮೂಲಕ ಉಳಿಸಲಾಯಿತು.

ಪ್ರಧಾನಿ ನೆತನ್ಯಾಹು ಪ್ರಶಂಸೆ:

ಈ ಸಾಹಸದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾ, “ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಹೀರೋ. ಅವರು ಗಂಭೀರ ಗಾಯಗೊಂಡಿದ್ದರೂ ಪ್ರಾಣದ ಹಂಗು ತೊರೆದು ಹೋರಾಡಿ ದೊಡ್ಡ ವಾಯು ದುರಂತವನ್ನು ತಪ್ಪಿಸಿದ್ದಾರೆ” ಎಂದು ಪ್ರಶಂಸಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಭಾರತೀಯ ಪೈಲಟ್‌ ನ ಸಾಹಸದ ಬಗ್ಗೆ ತೀವ್ರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಸೌದಿ ಅರೇಬಿಯಾದ ತಬುಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸೌದಿ ಅರೇಬಿಯಾದಲ್ಲಿರುವ ಭಾರತೀಯ ದೂತವಾಸ ತಿಳಿಸಿದೆ.

ಈ ಭೀಕರ ಘಟನೆಯ ಹಿನ್ನೆಲೆಯಲ್ಲಿ, ಫ್ಲೈದುಬೈ ಸಂಸ್ಥೆಯು ಇಸ್ರೇಲ್ ಮತ್ತು ದುಬೈ ನಡುವಿನ ಎಲ್ಲಾ ವಿಮಾನ ಹಾರಾಟಗಳನ್ನು ಮುಂದಿನ ಸೂಚನೆವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಮಗ್ರ ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಪ್ರಯಾಣಿಕರ ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಈ ಕ್ರಮ ಮುಂದುವರಿಯಲಿದೆ ಎಂದು ಏರ್‌ ಲೈನ್ಸ್ ಸ್ಪಷ್ಟಪಡಿಸಿದೆ.

ಘಟನೆಯ ತೀವ್ರತೆಯನ್ನು ಪರಿಗಣಿಸಿ, ಇಸ್ರೇಲ್ ಸರ್ಕಾರವು ಇನ್ನುಮುಂದೆ ತಮ್ಮ ದೇಶಕ್ಕೆ ಹಾರಾಟ ನಡೆಸುವ ಎಲ್ಲಾ ವಿದೇಶಿ ವಿಮಾನಗಳ ಪೈಲಟ್‌ಗಳ ಹಿನ್ನೆಲೆ ಹಾಗೂ ಗುರುತನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದಾಗಿ (Security Vet) ಘೋಷಿಸಿದೆ.

ಇತ್ತೀಚಿನ ಸುದ್ದಿ

Suspected Malware | Cloudflare

Warning

Suspected Malware

This website has been reported for potentially distributing malware.

Malware is malicious software created to intentionally disrupt the normal operations of a device.

Learn More