1:28 AM Saturday 18 - October 2025

ಪಹಲ್ಗಾಮ್ ಉಗ್ರರ ದಾಳಿಗೆ ಬಲಿಯಾದ ಕುಟುಂಬಗಳಿಗೆ ಹಿಂದೂಗಳೇ ನೆರವಾಗಬೇಕು: ಪರಿಹಾರ ಘೋಷಿಸಿದ ಶೃಂಗೇರಿ ಶ್ರೀ

shringeri shri
01/05/2025

ಚಿಕ್ಕಮಗಳೂರು:   ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಶೃಂಗೇರಿ ಶ್ರೀ ಖಂಡಿಸಿದ್ದು, ಉಗ್ರರ ದಾಳಿಯಿಂದ ಹಿಂದೂಗಳ ಕುಟುಂಬಗಳಿಗೆ ಹಿಂದೂಗಳೇ ನೆರವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಮೃತರ ಕುಟುಂಬಗಳಿಗೆ ಶೃಂಗೇರಿ ಶ್ರೀಗಳಿಂದ ಸಾಂತ್ವಾನ ಹೇಳಿದ್ದು,  ಉಗ್ರರ ದಾಳಿಯಿಂದ ಬಲಿಯಾದ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಮೃತಪಟ್ಟಿರುವ ಕುಟುಂಬಗಳು ಸಂಕಷ್ಟದಲ್ಲಿರುವ ಸಮಯದಲ್ಲಿ ಈ ಧನಸಹಾಯ ನೆರವಾಗಲಿದೆ. ಕುಟುಂಬಕ್ಕೆ‌ ಆರ್ಥಿಕವಾಗಿ‌ ನೆರವಾಗುವ ನಿಟ್ಟಿನಲ್ಲಿ ಮಠದಿಂದ ಪ್ರಸಾದದ ರೂಪದಲ್ಲಿ ಧನಸಹಾಯ  ನೀಡಲಾಗುವುದು,  ಮಠದ ಆಡಳಿತಾಧಿಕಾರಿಗಳು ಆ ಕುಟುಂಬಗಳಿಗೆ ಧನಸಹಾಯದ ವ್ಯವಸ್ಥೆ ಮಾಡುತ್ತಾರೆ ಎಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದ ಮಠದ ಶ್ರೀಗಳು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version