ಹೋಲಿ ಹಿನ್ನೆಲೆ: 70 ಮಸೀದಿಗಳನ್ನು ಟಾರ್ಪಲಿನಲ್ಲಿ ಮುಚ್ಚಿದ ಯುಪಿ ಸರ್ಕಾರ

12/03/2025

ಹೋಲಿ ಆಚರಣೆಗೆ ಮುಂಚಿತವಾಗಿ 70 ಮಸೀದಿಗಳನ್ನು ಉತ್ತರ ಪ್ರದೇಶದ ಶಾಯಿ ಯಾನ್ ಪುರ್ ಜಿಲ್ಲೆಯ ಆಡಳಿತವು ಟಾರ್ಪಲಿನಿಂದ ಮುಚ್ಚಿದೆ. ಹೋಲಿ ಆಚರಣೆಯ ಭಾಗವಾಗಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಮಸೀದಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಜಿಲ್ಲೆಯ ಧಾರ್ಮಿಕ ನಾಯಕರೊಂದಿಗೆ ಮಾತುಕತೆಯನ್ನು ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಹೋಲಿ ಆಚರಣೆಯ ಭಾಗವಾಗಿ ಶಾಹಿಹಾನ್ಪುರ್ ಜಿಲ್ಲೆಯಲ್ಲಿ ಜೂಟ್ಟ ಮಾರ್ ಹೋಲಿ ಎಂಬ ಹೆಸರಲ್ಲಿ ಸಾವಿರಾರು ಮಂದಿ ಭಾಗವಹಿಸುವ ಘೋಷ ಯಾತ್ರೆ ನಡೆಯಲಿದೆ. ಈ ಪ್ರದೇಶದಲ್ಲಿ ಅತ್ಯಂತ ಭಿನ್ನ ಹೋಲಿ ಆಚರಣೆಯಾಗಿ ಇದು ಗುರುತಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಸುಮಾರು ಹತ್ತು ಕಿಲೋಮೀಟರ್ ತನಕ ಈ ಘೋಷಯಾತ್ರೆ ಸಾಗಲಿದೆ. ಈ ಘೋಷಾ ಯಾತ್ರೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ತೊಂದರೆ ಕೊಡಬಾರದೆಂಬ ಕಾರಣಕ್ಕಾಗಿ ಯಾತ್ರೆ ಸಾಗುವ ದಾರಿಯಲ್ಲಿರುವ ಮಸೀದಿಗಳಿಗೆ ಟಾರ್ಪಲನ್ನು ಹೊದಿಸಲಾಗಿದೆ. ಈ ಮೂಲಕ ಮಸೀದಿಗಳಿಗೆ ಬಣ್ಣ ಎರಚುವುದನ್ನು ತಡೆಯಬಹುದಾಗಿದೆ ಎಂದು ಜಿಲ್ಲಾಡಳಿತ ಸಮರ್ಥನೆ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version