4:05 PM Saturday 13 - September 2025

ಜೇನು ತೆಗೆಯುವುದನ್ನು ನೋಡಲು ಹೋಗಿದ್ದ ಬಾಲಕ ಕಟ್ಟಡದಿಂದ ಬಿದ್ದು ಸಾವು!

honey
23/09/2022

ಮಲ್ಪೆ: ಅಪಾರ್ಟ್ ಮೆಂಟ್ ನಿಂದ ಕೆಳಗೆ  ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಕನ್ನರ್ಪಾಡಿ ಎಂಬಲ್ಲಿ ನಡೆದಿದೆ.

ಮೃತನನ್ನು ಆಂದ್ರ ಪ್ರದೇಶ ಮೂಲದ ಪ್ರಸ್ತುತ ಉದ್ಯಾವರ ನಿವಾಸಿ  ರೀನಾ ಮಂಡೆಲ್ ಎಂಬವರ ಮಗ ಆಶಿಕ್(13) ಎಂದು ಗುರುತಿಸಲಾಗಿದೆ.

ಜೇನು ತೆಗೆಯುವ ಕೆಲಸ ಮಾಡಿಕೊಂಡಿರುವ ರೀನಾ ಮಂಡೆಲ್ ಅವರು 3 ದಿನದ ಹಿಂದೆ ಉಡುಪಿಗೆ ಬಂದು ತಮ್ಮ ಸಂಬಂಧಿಕರೊಂದಿಗೆ ಉದ್ಯಾವರ ಚರ್ಚ್ ಹಿಂದುಗಡೆ ಟೆಂಟ್ ಹಾಕಿಕೊಂಡು  ವಾಸ ಮಾಡಿಕೊಂಡಿದ್ದರು. ಕನ್ನರಪಾಡಿ ಜಯದುರ್ಗಾ ದೇವಸ್ಥಾನದ ಎದುರು ಇರುವ ಪ್ಲಾಟ್ ವೊಂದರ ಅಪಾರ್ಟ್’ಮೆಂಟ್ ನ ಮಹಡಿಯಲ್ಲಿ ಇದ್ದ ಜೇನನ್ನು ಕಂಡು ಅದನ್ನು ತೆಗೆಯಲು ಫ್ಲಾಟ್ ನ ಮಾಲೀಕರ ಬಳಿ ಅನುಮತಿ ಕೇಳಿ ಜೇನು ತೆಗೆಯಲು ನಿನ್ನೆ ಬೆಳಿಗ್ಗೆ ರೀನಾ ಮಂಡೆಲ್ ಅವರ ಮಗಳ ಗಂಡ ಆಕಾಶ ಹಾಗೂ ಅವರ ಅಕ್ಕನ ಮಗಳ ಗಂಡ ರೋಶನ್ ಜೊತೆಗೆ ಆಶಿಕ್ ಅಪಾರ್ಟ್ ಮೆಂಟ್ ಗೆ ತೆರಳಿದ್ದರು.

ಬಳಿಕ ಆಕಾಶ  ಮತ್ತು ರೋಶನ್ ಅಪಾರ್ಟ್’ಮೆಂಟ್ ಮೇಲೆ ಹೋಗಿ ಜೇನು ತೆಗೆಯುತ್ತಿರುವಾಗ ಮಹಡಿ ಮೇಲಿಂದ ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದ ಆಶಿಕ್ ಆಯಾತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ.

ಗಂಭೀರ ಗಾಯಗೊಂಡ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ   ಈ ಬಗ್ಗೆ  ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version