MRPLನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಹೇಗೆ? | ಎಷ್ಟೆಲ್ಲ ಹಾನಿಯಾಗಿದೆ ಗೊತ್ತಾ? - Mahanayaka

MRPLನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಹೇಗೆ? | ಎಷ್ಟೆಲ್ಲ ಹಾನಿಯಾಗಿದೆ ಗೊತ್ತಾ?

mrpl mangalore
01/10/2026

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದ ದುರಂತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ಹನ್ನೆರಡು ಮಂದಿ ಗಾಯಗೊಂಡಿರುವ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕ ಆಸ್ತಿನಾಸ್ತಿ ಸಂಭವಿಸಿರುವ ದಾರುಣ ಘಟನೆ ವರದಿಯಾಗಿದೆ.

ಸೆಪ್ಟೆಂಬರ್ 30ರ ಮಧ್ಯಾಹ್ನ 12:15 ಗಂಟೆಯ ಸುಮಾರಿಗೆ ಎಮ್‌ ಆರ್‌ಪಿಎಲ್‌ ನ 3ನೇ ಹಂತದ (ಫೇಸ್–3) ‘ಕೋಕರ್ ಹೈಡ್ರೋ ಟ್ರೀಟರ್ ಯುನಿಟ್’ನಲ್ಲಿ ಈ ಅನಿರೀಕ್ಷಿತ ಹಾಗೂ ಭಾರೀ ಸ್ಫೋಟ ಸಂಭವಿಸಿದ್ದು, ಕಾರ್ಖಾನೆಯ ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳು ಛಿದ್ರಗೊಂಡು ಬೆಂಕಿಯ ಭೀಕರ ಜ್ವಾಲೆಯೊಂದಿಗೆ ಪರಿಸರದಲ್ಲಿ ಆವರಿಸಿದೆ.

ಕಾರ್ಖಾನೆಯ ಉದ್ಯೋಗಿಗಳಿಗೆ ಊಟೋಪಹಾರ ಮತ್ತು ನೀರು ಸರಬರಾಜು ಮಾಡುವ ‘ಕೆಆರ್ ಸ್ಟಾರ್ ಫುಡ್ ಆಂಡ್ ಹಾಸ್ಪಿಟಾಲಿಟಿ’ ಸಂಸ್ಥೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದ ಕಾರ್ಕಳದ ವಳಂಚರಬೆಟ್ಟು ನೆಲ್ಲಿಕಟ್ಟೆ ಹಿರ್ಗಾನ ನಿವಾಸಿ ರವಿ ಪೂಜಾರಿ ಎಂಬವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಸ್ಫೋಟದ ತೀವ್ರತೆಗೆ ಸಿಲುಕಿ ದೂರುದಾರ ರವಿ ಪೂಜಾರಿ, ಎಂಆರ್‌ ಪಿಎಲ್‌ನ ಮನೀಶ್ ಕರ್ಕಡ, ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಮತ್ತು ರಾಜೇಶ್ ಪೂಜಾರಿ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಇವರಲ್ಲಿ ರಾಜೇಶ್ ಪ್ರಸಾದ್ ಹಾಗೂ ಮನೀಶ್ ಕರ್ಕಡ ಅವರಿಗೆ ತೀವ್ರತರವಾದ ಗಾಯಗಳಾಗಿದ್ದವು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗಂಭೀರ ಗಾಯಗೊಂಡಿದ್ದ ಮನೀಶ್ ಕರ್ಕಡ ಅವರು ಕೊನೆಯುಸಿರೆಳೆದಿದ್ದಾರೆ.

ಈ ಭೀಕರ ದುರ್ಘಟನೆಗೆ ಪೇಸ್–3 ರ ‘ಕೋಕರ್ ಹೈಡ್ರೋ ಟ್ರೀಟರ್ ಯುನಿಟ್’ನ ಮುಖ್ಯಸ್ಥರು ಹಾಗೂ ಎಮ್‌ ಆರ್‌ ಪಿಎಲ್ ಸಂಸ್ಥೆಯ ಮುಖ್ಯಸ್ಥರ ಸಂಪೂರ್ಣ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ಗಾಯಾಳು ರವಿ ಪೂಜಾರಿ ಅವರು ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕಾರ್ಖಾನೆಯ ಸುತ್ತಮುತ್ತಲಿನ ಮೂರು ಗ್ರಾಮಗಳ ಜನವಸತಿ ಪ್ರದೇಶಗಳಿಗೆ ಭಾರೀ ಹಾನಿಯಾಗಿದೆ. ಮಾಹಿತಿಗಳ ಪ್ರಕಾರ, ಒಟ್ಟು 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳು ಈ ಸ್ಫೋಟದಿಂದ ಹಾನಿಗೀಡಾಗಿವೆ. ಜೋಕಟ್ಟೆ ಗ್ರಾಮದಲ್ಲಿ 25 ಮನೆಗಳು ಹಾಗೂ 5 ಪ್ರಾರ್ಥನಾ ಕೇಂದ್ರಗಳು, ಕಳವಾರು ಗ್ರಾಮದಲ್ಲಿ 19 ಮನೆಗಳು ಹಾಗೂ 3 ಪ್ರಾರ್ಥನಾ ಕೇಂದ್ರಗಳು ಹಾನಿಗೊಳಗಾಗಿದ್ದು, ಬಾಳ ಗ್ರಾಮದಲ್ಲಿ 10 ಮನೆಗಳು ಸ್ಫೋಟದ ರಭಸಕ್ಕೆ ಹಾನಿಯಾಗಿದೆ.

ಇತ್ತೀಚಿನ ಸುದ್ದಿ

Suspected Malware | Cloudflare

Warning

Suspected Malware

This website has been reported for potentially distributing malware.

Malware is malicious software created to intentionally disrupt the normal operations of a device.

Learn More