ಬಂಗ್ಲಗುಡ್ಡೆಯಲ್ಲಿ ಪತ್ತೆಯಾದ ಕಳೇಬರ ಎಷ್ಟು?: ಕಾರ್ಯಾಚರಣೆ ಮುಂದುವರಿಯುತ್ತಾ?

ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಮತ್ತಷ್ಟು ತಿರುವುಗಳೊಂದಿಗೆ ಮುಂದುವರಿದಿದೆ. ಇಂದು ಅಧಿಕಾರಿಗಳ ಪಡೆಯೇ ಬಂಗ್ಲಗುಡ್ಡೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದು, ಹಲವಾರು ವರದಿಗಳ ಪ್ರಕಾರ, ಎಸ್ ಐಟಿ ಅಧಿಕಾರಿಗಳಿಗೆ ಕಳೇಬರ ಸಿಕ್ಕಿದೆ ಅಂತ ಹೇಳಲಾಗ್ತಿದೆ.
ಇಂದಿನ ಕಾರ್ಯಾಚರಣೆ ಬಗ್ಗೆ ಎಸ್ ಐಟಿ ಯಾವುದೇ ಮಾಹಿತಿಗಳನ್ನ ಹಂಚಿಕೊಂಡಿಲ್ಲ, ಆದರೆ ಸ್ಥಳೀಯವಾಗಿ ಹಲವು ಮಾಹಿತಿಗಳು ಹರಿದಾಡುತ್ತಿದ್ದು, ಇಂದಿನ ಕಾರ್ಯಾಚರಣೆಯಲ್ಲಿ 5ರಿಂದ 9 ಕಳೇಬರಗಳು ಸಿಕ್ಕಿವೆ ಅಂತ ಮಾಹಿತಿ ಹರಿದಾಡುತ್ತಿದೆ.
ಸೌಜನ್ಯ ಮಾವ ವಿಠಲ್ ಗೌಡ ನೀಡಿರುವ ಹೇಳಿಕೆ ಆಧರಿಸಿದ ಶೋಧ ಕಾರ್ಯ ಆರಂಭವಾಗಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿಗಳಂತೆ, ಬಂಗ್ಲೆಗುಡ್ಡ ಕಾಡಿಗೆ ಎಂಟ್ರಿ ಕೊಟ್ಟ ಅರ್ಧಗಂಟೆಯಲ್ಲೇ ಮೂಳೆಗಳು ಹಾಗೂ ಪುರುಷನ ಬಟ್ಟೆ ಪತ್ತೆಯಾಗಿದೆ ಅಂತ ಹೇಳಲಾಗಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ಹತ್ತಿರದಲ್ಲಿರುವ ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ತಿ ಪಂಜರ, ಬುರುಡೆಗಾಗಿ ಎಸ್ ಐ ಟಿ ಬೆಳಗ್ಗೆಯಿಂದ ಶೋಧ ನಡೆಸಲು ಶುರು ಮಾಡಿದೆ. ಎಸ್ ಐ ಟಿ ಶೋಧದ ವೇಳೆ ಕೆಲ ಮೂಳೆಗಳ ಅವಶೇಷ, ಬಟ್ಟೆಯ ತುಂಡುಗಳು ಸಿಕ್ಕಿದ್ದು, ಇವುಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿತ್ತು. ಇದೀಗ ಬಂಗ್ಲೆ ಗುಡ್ಡೆಯ 5 ಕಡೆ ಅಸ್ಥಿಪಂಜರ ಪತ್ತೆಯಾಗಿದೆ ಎನ್ನಲಾಗಿದೆ. ಭೂಮಿಯ ಮೇಲ್ಭಾಗದಲ್ಲಿರುವ ಅಸ್ಥಿಪಂಜರಗಳನ್ನು ಪತ್ತೆ ಮಾಡಿ ಸೋಕೋ ಟೀಂ ಇದನ್ನು ಸಂಗ್ರಹಿಸಿದೆ ಎನ್ನಲಾಗಿದೆ.
ಧರ್ಮಸ್ಥಳದ ಬಂಗ್ಲೆಗುಡ್ಡ ಇದೀಗ ನೂರಾರು ಮೃತದೇಹಗಳನ್ನು ಹೂತಿಡಲಾಗಿದೆ ಎನ್ನುವ ರಹಸ್ಯ ಸ್ಥಳವಾಗಿ ಮಾರ್ಪಟ್ಟಿದೆ. ಚಿನ್ನಯ್ಯ ಹೇಳಿರೋದು ಸತ್ಯ ಅಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ. ಇನ್ನೂ ಕೂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದೇ ಆದಲ್ಲಿ ಮತ್ತಷ್ಟು ಕಳೇಬರ ಪತ್ತೆಯಾಗುತ್ತದೆ ಅಂತ ಸೌಜನ್ಯ ಮಾವ ವಿಠ್ಠಲ ಗೌಡ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD