ಸಿಕ್ಕೇ ಬಿಡ್ತು ಮಾನವನ ಮೂಳೆ: ಧರ್ಮಸ್ಥಳ ಪ್ರಕರಣದಲ್ಲಿ ಭಾರೀ ದೊಡ್ಡ ಬೆಳವಣಿಗೆ

ಧರ್ಮಸ್ಥಳ: ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣ ಸಂಬಂಧ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೂರನೇ ದಿನವಾದ ಇಂದು ಎಸ್ ಐಟಿ ಅಧಿಕಾರಿಗಳಿಗೆ ಮಹತ್ವದ ಸಾಕ್ಷಿಗಳು ಲಭ್ಯವಾಗಿದೆ. ಆದರೆ ಎಸ್ ಐಟಿ ಇನ್ನೂ ಕೂಡ ಖಚಿತಪಡಿಸಿಲ್ಲ. ಆದರೆ ಸ್ಥಳೀಯ ಮಾಹಿತಿಯ ಪ್ರಕಾರ ಮಾನವನ ಮೂಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸೈಟ್ ನಂಬರ್ 6ರಲ್ಲಿ ಈ ಬೆಳವಣಿಗೆ ನಡೆದಿದೆ. ಸೈಟ್ ನಂಬರ್ 1, 2, 3, 4, 5 ನೇತ್ರಾವತಿ ನದಿಗೆ ಹೊಂದಿಕೊಂಡಂತೆ ಗುರುತು ಮಾಡಲಾಗಿತ್ತು. ಹಾಗಾಗಿ ಸೈಟ್ ನಂಬರ್ 6 ಕೂಡ ಇದರ ಸಮೀಪವೇ ಇದೆ. ಹೀಗಾಗಿ ಇದರಲ್ಲೂ ಯಾವುದೇ ಮೂಳೆಗಳು ಲಭ್ಯವಾಗಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ, ಇದೀಗ ಸೈಟ್ ನಂಬರ್ 6ರಲ್ಲಿ ಮಾನವನ ಮೂಳೆ ದೊರೆತಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಮಾನವನ ಕೈಯ ಮೂಳೆ ಇದಾಗಿದೆ ಎಂದು ಹೇಳಲಾಗಿದೆ. ಆದರೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಪ್ಲಾಸ್ಟಿಕ್ ಕವರ್ ನಲ್ಲಿ ಪತ್ತೆಯಾದ ಮೂಳೆಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿರುವ ದೃಶ್ಯ ಕಂಡು ಬಂದಿದೆ. ಇನ್ನೊಂದೆಡೆ ಈ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಂಡಿದ್ದು, ಮಾಧ್ಯಮಗಳಲ್ಲಿ ದೃಶ್ಯ ಕಾಣಿಸದಂತೆ ಹಸಿರು ಬಣ್ಣದ ಬಟ್ಟೆಯೊಂದನ್ನು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿ ಅಡ್ಡವಾಗಿರಿಸಿದ್ದಾರೆ. ತನಿಖೆಯ ಹಾದಿತಪ್ಪದಂತೆ ಎಸ್ ಐಟಿ ಅಧಿಕಾರಿಗಳು ಈ ಮಹತ್ವದ ಕ್ರಮವನ್ನು ಕೈಗೊಂಡಿದ್ದಾರೆ.
ಮೂಳೆ ಪತ್ತೆಯಾದ ಹಿನ್ನೆಲೆ ಮತ್ತಷ್ಟು ಆಳಕ್ಕೆ ಗುಂಡಿ ಅಗೆಯಲು ಎಸ್ ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಮಾನವನ ಅಸ್ಥಿಪಂಜರದ ಮತ್ತಷ್ಟು ಭಾಗಗಳು ಈ ಪ್ರದೇಶದಲ್ಲಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನುಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD