ಮಂಡ್ಯದಲ್ಲಿ ಪತಿ—ಪತ್ನಿ ದುರಂತ ಅಂತ್ಯ: 1 ವರ್ಷದ ಮಗು ಅನಾಥ: ಏನಿದು ಘಟನೆ?

death
21/08/2024

ಮಂಡ್ಯ: ಪತ್ನಿ ನೇಣುಬಿಗಿದು ಸಾವಿಗೆ ಶರಣಾದ ಬೆನ್ನಲ್ಲೇ ಪತಿ ಕೂಡ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಗದ್ದೆಹೊಸೂರಿನಲ್ಲಿ ನಡೆದಿದೆ.

ಪತ್ನಿ ಸ್ವಾತಿ (21) ಹಾಗೂ ಪತಿ ಮೋಹನ್ ಸಾವಿಗೆ ಶರಣಾಗಿರುವವರಾಗಿದ್ದಾರೆ. ಇವರ ಒಂದು ವರ್ಷದ ಹೆಣ್ಣು ಮಗು ತಂದೆ—ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ.
ಎರಡು ವರ್ಷಗಳ ಹಿಂದೆ ಸ್ವಾತಿ ಹಾಗೂ ಮೋಹನ್ ಮದುವೆಯಾಗಿದ್ದರು. ಇವರಿಗೆ 1 ವರ್ಷದ ಹೆಣ್ಣು ಮಗು ಕೂಡ ಇದೆ. ಇತ್ತೀಚೆಗೆ ಇವರ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ನಡೆಯುತ್ತಿತ್ತು.

ನಿನ್ನೆ ಸಂಜೆ ಮೋಹನ್ ಪತ್ನಿಯನ್ನು ತನ್ನ ಮನೆಗೆ ಕರೆತಂದಿದ್ದ. ಆದರೆ ಮಗುವನ್ನು ಅತ್ತೆ ಮನೆಯಲ್ಲೇ ಬಿಟ್ಟು ಬಂದಿದ್ದ. ಮನೆಗೆ ಬಂದ ಕೆಲವು ಹೊತ್ತಲ್ಲಿ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಒಂದು ಗಂಟೆ ಬಳಿಕ ಸ್ವಾತಿ ಸಹೋದರ ಅವರ ಮನೆಗೆ ಮಗುವನ್ನು ಕರೆದುಕೊಂಡು ಬಂದ ವೇಳೆ ಸ್ವಾತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅತ್ತ ಪತಿ ಮೋಹನ್ ನಾಪತ್ತೆಯಾಗಿದ್ದ. ಬೆಳಗ್ಗೆ ಮೋಹನ್ ನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿತ್ತು.

ಸ್ವಾತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು ಹೀಗಾಗಿ ಪತಿ ಮೋಹನ್ ಹತ್ಯೆ ಮಾಡಿದ್ದಾನೆ ಎಂದು ಆಕ್ರೋಶಗೊಂಡ ಸ್ವಾತಿ ಕುಟುಂಬಸ್ಥರು ಮೋಹನ್ ನ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಮನೆಯಲ್ಲಿದ್ದ 10 ಲಕ್ಷಕ್ಕೂ ಅಧಿಕ ಮೌಲ್ಯದ ಕೊಬ್ಬರಿ ಸುಟ್ಟು ಕರಕಲಾಗಿತ್ತು.

ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಕೇಸ್ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version