10:11 PM Monday 15 - September 2025

ರಾಷ್ಟ್ರಮಟ್ಟದಲ್ಲಿ ವಿತರಣೆಯಾಗುತ್ತಿರುವ ಕಲ್ಪರಸ ಕಂಪನಿಯ ಬೆಲ್ಲ!

kalpa vrksha
02/11/2023

ತೆಂಗು ಬೆಳೆಗಾರರ ಹಿತಾಸಕ್ತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದ ಜಪ್ತಿಯಲ್ಲಿ ಪ್ರಾರಂಭವಾದ ಕಲ್ಪರಸ ಕಂಪನಿಯ ಉತ್ಪನ್ನವಾದ ಬೆಲ್ಲಕ್ಕೆ ಇಂದು ರಾಷ್ಟ್ರಮಟ್ಟದಲ್ಲಿ ಬೇಡಿಕೆ ಬಂದಿದೆ.

ಉಡುಪಿ ಕಲ್ಪರಸ ಕೋಕೊನಟ್ ಎಂಡ್ ಆಲ್ ಸ್ಪೈಸಸ್ ಪ್ರೊಡ್ಯುಸರ್ ಕಂಪನಿ ಎಂಬ ಹೆಸರಿನ ರೈತ ಉತ್ಪಾದಕ ಕಂಪನಿ ಮೂಲಕ ಅಬಕಾರಿ ಇಲಾಖೆಯ ಪರವಾನಿಗೆ ಪಡೆದು ಕಲ್ಪರಸದ ಉತ್ಪಾದನೆಯ ಜೊತೆಗೆ ಅದರ ಉಪ ಉತ್ಪನ್ನಗಳಾದ ಶರ್ಕರ, ಗುಡ, ಮದು ಮತ್ತು ವಿನೆಗರ್ ಮೂಲಕ ಅನೇಕ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆ ಮಾಡಿ, ಆರೋಗ್ಯದ ದೃಷ್ಟಿಯಿಂದ ಗ್ರಾಹಕರನ್ನು ಸೆಳೆದಿದೆ.

ಇಂದು ಕಲ್ಪರಸದ 500 ಬಾಟಲಿ ಬೆ ಲ್ಲ (ಗುಡ) ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಬೇಡಿಕೆಯ ಮೇರೆಗೆ ದೆಹಲಿಗೆ ಸರಬರಾಜಾಗಿದ್ದು, ದೀಪಾವಳಿ ಸಂದಭರ್ದಲಿ್ಲ ಕೇಂದ್ರ ಸರಕಾರದ ಮಂತ್ರಿಗಳಿಗೆ , ವಿದೇಶಿ ರಾಯಭಾರಿಗಳಿಗೆ ಹಾಗೂ ರಾಷ್ಟ್ರಮಟ್ಟದ ಗಣ್ಯಾತಿಗಣ್ಯರಿಗೆ ನೀಡುವ ಉಡುಗೊರೆಯ ಪೆಟ್ಟಿಗೆಯನ್ನು ಸೇರಲಿದೆ. ಆ ಮೂಲಕ ರಾಷ್ಟ್ರ ರಾಜಧಾನಿಯ ಗಣ್ಯರ ಮನೆಗಳಿಗೆ ನಮ್ಮ ಕಲ್ಪರಸದ ಬೆಲ್ಲದ ಕಂಪು ಪಸರಿಸಲಿದೆ ಎಂದು ಕಂಪನಿಯ ಅಧ್ಯಕ್ಷ ಸತ್ಯನಾರಾಯಣ ಉಡುಪ ಜಪ್ತಿಯವರು ತಿಳಿಸಿದ್ದಾರೆ.

ಹಾಗೆಯೇ ಉಡುಪಿ ಜಿಲ್ಲೆಯಿಂದ ರಾಜ್ಯದ ಗಣ್ಯರಿಗೆ ಸಂಜೀವಿನಿ ಒಕ್ಕೂಟಗಳ ಮೂಲಕ ತಯಾರಾಗುತ್ತಿರುವ 150 ಉಡುಗೊರೆ ಬುಟ್ಟಿಯಲ್ಲೂ ಕೂಡ ನಮ್ಮ ಕಲ್ಪರಸದ ಬೆಲ್ಲವನ್ನು ಇರಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಹೆಚ್.ರವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಇಂತಹ ದೊಡ್ಡ ಅವಕಾಶ ನಮಗೆ ಲಭಿಸಿದೆ. ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳಿಗೆ ಅಪಾರ ಬೇಡಿಕೆ ಉಂಟಾಗಿರುವ ಕಾರಣ ಅದರ ಉತ್ಪಾದನೆಗೆ ರೈತರುಗಳಿಗೆ ಹೆಚ್ಚು ಪ್ರೇರಣೆ ನೀಡಿ, ತೆಂಗು ಬೆಳೆಗಾರರಿಗೆ ಆರ್ಥಿಕವಾಗಿ ಬೆಂಬಲ ಸಿಗುವ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಈ ಕಂಪನಿ ಉಡುಪಿ ಜಿಲ್ಲೆಯಾದ್ಯಂತ ಪ್ರಸ್ತುತ 1,028 ರೈತ ಶೇರುದಾರರನ್ನು ಹೊಂದಿರುವುದಲ್ಲದೆ, ಜಿಲ್ಲೆಯ 73 ಗ್ರಾಮಗಳಲ್ಲಿ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿಯನ್ನು ಹೊಂದಿ 6,500ಕ್ಕೂ ಹೆಚ್ಚು ತೆಂಗು ಬೆಳೆಗಾರರ ಒಕ್ಕೂಟ ಹಾಗೂ ಕಂಪನಿಯನ್ನು ರಚಿಸಿಕೊಂಡು ತೆಂಗಿನ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ದೊರಕಿಸುವ ನಿಟ್ಟನಲ್ಲಿ ಪ್ರಯತ್ನಶೀಲವಾಗಿದೆ. ಇಂತಹ ಸರಕಾರದ ಅವಕಾಶದಿಂದ ನಮ್ಮ ಗುರಿ ಮುಟ್ಟಲು ಹೆಚ್ಚು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ಅಭಿಪ್ರಾಯ

ಇತ್ತೀಚಿನ ಸುದ್ದಿ

Exit mobile version