ಹುಲಿಗೆ ಜೈ, ಮುಂದಿನ ಮುಖ್ಯಮಂತ್ರಿಗೆ ಜೈ: ವಿ.ಸೋಮಣ್ಣಗೆ ಭರ್ಜರಿ ಸ್ವಾಗತ

somanna
20/04/2023

ಚಾಮರಾಜನಗರ: ವರುಣಾ ಬಳಿಕ ಚಾಮರಾಜನಗರದಲ್ಲಿ ಎರಡನೇ ಸುತ್ತಿನ ಮತಬೇಟೆ ಆರಂಭಿಸಿರುವ ಸಚಿವ ಸೋಮಣ್ಣ ಚಾಮರಾಜನಗರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದಾರೆ.

ಬೆಳಗ್ಗೆ 8 ರಿಂದಲೇ ಊರೂರು ಭೇಟಿ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಒಂದೇ ದಿನ 20 ಊರುಗಳಿಗೆ ಭೇಟಿಕೊಟ್ಟು ಮತಯಾಚಿಸುವ ಪ್ರವಾಸ ಪಟ್ಟಿ ತಯಾರಿಸಿಕೊಂಡಿದ್ದಾರೆ.

ಇನ್ನು, ಮಲ್ಲಯ್ಯನಪುರ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಜನರನ್ನು ಗುಂಪು ಸೇರಿಸಿಕೊಂಡು ಮಾತನಾಡಿ, ಹಣ-ಹೆಂಡಕ್ಕೆ ಮತ ಮಾರಾಟ ಮಾಡಿಕೊಳ್ಳಬೇಡಿ, ಅಭಿವೃದ್ಧಿ ನೋಡಿ ಮತ ಹಾಕಿ, ಸೋಮಣ್ಣನೇ ಬೇರೆ– ನನ್ನ ಸ್ಟೈಲೆ ಬೇರೆ ಎಂದು ಸಿನಿ ಡೈಲಾಗ್ ಹೊಡೆದು ಮತ ಶಿಕಾರಿ ನಡೆಸಿದರು.

ಇನ್ನು, ಉತ್ತುವಳ್ಳಿ ಗ್ರಾಮಕ್ಕೆ ಸಚಿವ ಸೋಮಣ್ಣ ಎಂಟ್ರಿಯಾಗುತ್ತಿದ್ದಂತೆ ಬೃಹತ್ ಹಾರ, ಪುಷ್ಪ ವೃಷ್ಠಿ ಸುರಿಸಿದ ಜನರು ಹುಲಿಗೆ ಜೈ, ಮುಂದಿನ ಮುಖ್ಯಮಂತ್ರಿಗೆ, ಮುಂದಿನ ಸಿಎಂಗೆ ಜೈ ಎಂದೆಲ್ಲಾ ಘೋಷಣೆ ಕೂಗಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version