4:24 AM Saturday 17 - January 2026

ಯಾರು ದೇಶಪ್ರೇಮಿಗಳು ಯಾರು ದೇಶದ್ರೋಹಿಗಳು ಎಂದು ಜ.26ರಂದು ತೋರಿಸುತ್ತೇವೆ | ಕೇಂದ್ರ ಸರ್ಕಾರಕ್ಕೆ ರೈತರ ಎಚ್ಚರಿಕೆ

30/12/2020

ನವದೆಹಲಿ: ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯನ್ನು ಭಯೋತ್ಪಾದಕರ ಕೃತ್ಯ ಎಂಬಂತೆ ಬಿಂಬಿಸಲು ಮುಂದಾಗುತ್ತಿರುವಂತೆಯೇ ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ ಅವರು ಕೇಂದ್ರ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ 7ನೇ ಸುತ್ತಿನ ಮಾತುಕತೆ ಇಂದು ನಡೆಯಲಿದೆ. ರಾಕೇಶ್ ಟಿಕಾಯತ್ ಅವರು ಹೇಳಿರುವಂತೆ ರೈತರು ತಮ್ಮ ಯಾವುದೇ ಬೇಡಿಕೆಯಲ್ಲಿ ಬದಲಾವಣೆ ಮಾಡುವುದಿಲ್ಲ. ತಮ್ಮ ಬೇಡಿಕೆ ಈಡೇರಿಸದಿದ್ದರೆ, ದೊಡ್ಡಮಟ್ಟದ ಹೋರಾಟ ಮಾಡುವುದಾಗಿ ಅವರು ಹೇಳಿದ್ದಾರೆ.

ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳದಿದ್ದರೆ, ದೇಶದ್ರೋಹಿಗಳು ಯಾರು ಎನ್ನುವುದನ್ನು ನಾವು ತೋರಿಸುತ್ತೇವೆ. ಜನವರಿ 26ರಂದು ನಾವು ನಮ್ಮ ಟ್ರಾಕ್ಟರ್ ಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಯಾರು ದೇಶ ಪ್ರೇಮಿಗಳು ಯಾರು ದೇಶದ್ರೋಹಿಗಳು ಎನ್ನುವುದನ್ನು ನಾವು ತೋರಿಸುತ್ತೇವೆ ಎಂದು ಅವರು ಕೇಂದ್ರ ಸರ್ಕಾರಕ್ಕೆ ಖಡಕ್ಕ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version