1:52 PM Thursday 16 - October 2025

ಎಸ್ ಸಿ-ಎಸ್ ಟಿಗಳ ಜಾತಿ ನಿಂದನೆ; “ಮಳೆಯಲಿ ಜೊತೆಯಲಿ” ನಟಿಯ ವಿರುದ್ಧ ಎಫ್ ಐಆರ್

yuvika chaudhary
29/05/2021

ಹರ್ಯಾಣ: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ಚಿತ್ರದಲ್ಲಿ ನಟಿಸಿದ್ದ ನಟಿ ಯುವಿಕಾ ಚೌಧರಿ ವಿರುದ್ಧ ಹರ್ಯಾಣ ಪೊಲೀಸರು ಎಸ್ ಸಿ, ಎಸ್ ಟಿ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ.

ನಟಿ ಯುವಿಕಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಕೀಳಾಗಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದ್ದು, ವಿಡಿಯೋ ವೈರಲ್ ಬೆನ್ನಲ್ಲೇ ದಲಿತ ಹಕ್ಕುಗಳ ಕಾರ್ಯಕರ್ತ ರಜತ್ ಅವರು ಯುವಿಕಾ ವಿರುದ್ಧ ದೂರು ನೀಡಿದ್ದಾರೆ.

ದೂರು ಪಡೆದುಕೊಂಡಿರುವ ಪೊಲೀಸರು ನಟಿ ಯುವಿಕಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಕೇಸ್ ಜಡಿಯುತ್ತಿದ್ದಂತೆಯೇ ನಟಿ ಯುವಿಕಾಗೆ ಬಿಸಿ ಮುಟ್ಟಿದ್ದು, ಟ್ವಿಟ್ಟರ್ ನಲ್ಲಿ ಕ್ಷಮೆ ಕೇಳಿದ್ದಾರೆ.’

ನಾನು ಯಾರಿಗೂ ಬೇಸರ ಮಾಡಬೇಕು  ಎನ್ನುವ ಉದ್ದೇಶದಿಂದ ಈ ರೀತಿಯಾಗಿ ಮಾತನಾಡಿಲ್ಲ ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version