3:31 PM Sunday 28 - September 2025

ಜೀವನಧಾರೆ ಫೌಂಡೇಶನ್ ಉಡುಪಿ ಉದ್ಘಾಟನೆ |  ಜೀವನಧಾರೆ ಫೌಂಡೇಶನ್ ಗೆ ಬಲ ತುಂಬಬೇಕಾಗಿದೆ: ಚೇತನ್ ಅಹಿಂಸಾ

chethan ahimsa
22/09/2025

ಉಡುಪಿ: ಜೀವನಧಾರೆ ಫೌಂಡೇಶನ್ ಉಡುಪಿ ಹಾಗೂ ಬ್ರೈನ್ ಫೌಂಡೇಶನ್ ಬೀದರ್ ಸಹಭಾಗಿತ್ವದಲ್ಲಿ ಇಲ್ಲಿನ ಜಗನ್ನಾಥ ಸಭಾ ಭವನ ( ಬಡಗುಬೆಟ್ಟು ಸೊಸೈಟಿ ಕಟ್ಟಡ)  ಮಿಷನ್ ಕಂಪೌಂಡ್ ಉಡುಪಿಯಲ್ಲಿ ಜೀವನಧಾರೆ ಫೌಂಡೇಶನ್ ಉಡುಪಿ ಉದ್ಘಾಟನೆಗೊಂಡಿತು.

ಚೇತನ್ ಅಹಿಂಸಾ ರವರು ಸಸ್ಯಕ್ಕೆ ನೀರೆರೆಯುವ ಮುಖೇನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜೀವನಧಾರೆ ಫೌಂಡೇಶನ್  ಪರಿಸರವನ್ನು ಸಂರಕ್ಷಿಸುವ ಹಾಗೂ ಪ್ರಕೃತಿ ಬಗ್ಗೆ ಜನಜಾಗೃತಿ ಮೂಡಿಸುವ ಒಂದು ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಹುಟ್ಟಿಕೊಂಡಿದೆ ಅದಕ್ಕಾಗಿ ನಾವು ನೀವೆಲ್ಲರೂ ಸೇರಿಕೊಂಡು ಬಲ ತುಂಬಬೇಕಾಗಿದೆ ಎಂದರು.

ನೀರು, ಗಾಳಿ ಮಲಿನಗೊಳ್ಳುವಿಕೆ ಹಾಗೂ ಕಾಡು ನಾಶದ ಹಿಂದೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಕಾರ್ಪೋರೆಟ್ ಕಂಪನಿಗಳ ದುರಾಸೆಯೇ ಪ್ರಮುಖ ಕಾರಣವಾಗಿದೆ ಎಂದು ನಟ ಚೇತನ್ ಒತ್ತಿ ಹೇಳಿದರು.

ಸಂಸ್ಥೆಯ ಸಂಸ್ಥಾಪಕರಾದ ಖಲೀಲ್ ಕೆರಾಡಿ ಮಾತನಾಡಿ,  ನೀರಿನಿಂದ ಹರಡುತ್ತಿರುವ ಕಾಯಿಲೆಗಳು, ಕಾಡಿನ ನಾಶದಿಂದ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ವಿಪರೀತ ಮಳೆಯ ಅಸಮತೋಲನ ಹಾಗೂ  ಗಾಳಿಯ ಮಲಿನದಿಂದ ಭಾರತದ ಜನರ ಜೀವಿತಾವಧಿ ಕಡಿತಗೊಳ್ಳುತ್ತಿರುವುದು ‌ಪರಿಸರ ರಕ್ಷಣೆಯ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಓದಗಿಸುವ ಮೂಲ ಗುರಿಯನ್ನು ಇಟ್ಟುಕೊಂಡು ಜೀವನಧಾರೆ ಫೌಂಡೇಶನ್ ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.

ಕ್ರಾಂತಿ ಕಲ್ವಾಡಿಕರ್ ಮಾತನಾಡಿ, ಪರಿಸರ ಸಂರಕ್ಷಣೆ ಸಲುವಾಗಿ ಉದ್ಘಾಟನೆಗೊಂಡ ಜೀವನಧಾರೆ ಫೌಂಡೇಶನ್ ಉತ್ತಮ ಪ್ರಾರಂಭವನ್ನೆ ಕಂಡಿದೆ ಮುಂದಿನ ದಿನಗಳಲ್ಲಿ ಜೀವನಧಾರೆ ಫೌಂಡೇಶನ್ ಜೊತೆ ನಾವೆಲ್ಲರೂ ಸೇರಿ ಇಂತಹ ಮಹತ್ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.

ಧನಂಜಯ ಬಿ. ಸಹ ಸಂಶೋಧಕರು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇವರು ಮಾತನಾಡುತ್ತ ನಾಶವಾಗುತ್ತಿರುವ ಕಾಡುಗಳಿಂದಾಗಿ ಪಕ್ಷಿಗಳು ನಾಶವಾಗುತ್ತಿದೆ. ಪಕ್ಷಿಗಳ ನಾಶದಿಂದ ಕಾಡುಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷಕತೆಯನ್ನು ನಂದಾದೀಪ ಬೋರಳೆ ಸಂಸ್ಥಾಪಕರು ಬ್ರೈನ್ ಫೌಂಡೇಶನ್ ಬೀದರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ, ಎಸ್.ಡಿ. ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ (ರಿ) ಜಿಲ್ಲಾಧ್ಯಕ್ಷರು ಆದ ಅಬ್ದುಲ್ ಸಲಾಮ್ ಚಿತ್ತೂರ್, ಶಾಂತಿ ಪೆರೇರಾ ಇನ್ನರ್ ವ್ಹೀಲ್ ಕ್ಲಬ್ ಕಲ್ಯಾಣಪುರ, ಕುಸುಮಾ ಮನೋಜ್ ಅಧ್ಯಕ್ಷರು ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ, ಮೌಲಾನಾ ಮುಹಮ್ಮದ್ ತೌಫೀಕ್, ಉದಯಕುಮಾರ್ ತಲ್ಲೂರ್ ಸಂಚಾಲಕರು ದಸಂಸ (ಭೀಮ ಘರ್ಜನೆ) ಕರ್ನಾಟಕ, ನಕ್ವಾ ರಹಮತುಲ್ಲಾಹ್  ಅಧ್ಯಕ್ಷರು ಅತ್ತೀಬಿಯಾನ್ ಟಿವಿ ಹೈದರಾಬಾದ್, ಶಾಕೀರ್ ಹಾವಂಜೆ,  ಏಕ್ತಾ ಇವೆಂಟ್ಸ್ ನ ವಿಠ್ಠಲ್ ಸಾಲಿಕೇರಿ, ವಿಸ್ಡಮ್ ವಿದ್ಯಾ ಸಂಸ್ಥೆ ದಾವಣಗೆರೆಯ ಇಲಿಯಾಸ್ ಖಾನ್, ಮೋಹನ್ ಸಾಲಿಕೇರಿ  ಉಪಸ್ಥಿತರಿದ್ದರು.

ನೈ‌ನಾ ಶೆಟ್ಟಿ ನಿರೂಪಿಸಿದರು. ರೂಪದರ್ಶಿ ವಿದ್ಯಾ ಸರಸ್ವತಿರವರು  ಪ್ಲಾಸ್ಟಿಕ್ ಬದಲು  ತರಕಾರಿ ತ್ಯಾಜ್ಯಗಳಿಂದ ತಯಾರಿಸಲ್ಪಟ್ಟ ಕೈ ಚೀಲಗಳನ್ನು ಪರಿಚಯಿಸಿದರು.  ಉಮೇಶ್ ಪೂಜಾರಿ ವಂದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version