ಪೌರತ್ವ ತಿದ್ದುಪಡಿ ಕಾಯ್ದೆ ಶೀಘ್ರವೇ ಜಾರಿ | ಜೆ.ಪಿ.ನಡ್ಡಾ

20/10/2020

ಕೋಲ್ಕತ್ತಾ: ದೇಶದಲ್ಲಿ ಕೊರೊನಾಕ್ಕಿಂತಲೂ ಹೆಚ್ಚು ಅನಾಹುತಗಳಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕೊರೊನಾ ಸದ್ದಿನಿಂದಾಗಿ ಮುಚ್ಚಿ ಹೋಗಿತ್ತು. ಇದೀಗ ಇದು ಮತ್ತೆ ಆರಂಭವಾಗುವ ಸೂಚನೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿದ್ದಾರೆ.

ಸೋಮವಾರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆಸಲಾದ ಸಭೆಯೊಂದರಲ್ಲಿ ನಡ್ಡಾ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರವೇ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿಳಂಬವಾಗಿತ್ತು. ಅದನ್ನು ಶೀಘ್ರವೇ ಜಾರಿ ಮಾಡುತ್ತೇವೆ ಎಂದು ನಡ್ಡಾ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿ ಸರ್ಕಾರದ ಸಂದರ್ಭದಲ್ಲಿ ಹಿಂದೂ ಸಮುದಾಯವು ಆಘಾತಗಳನ್ನು ಅನುಭವಿಸಿದೆ. ಇದು ಈಗ ಅವರಿಗೆ ಅರ್ಥವಾಗಿದೆ.  ಹಾಗಾಗಿ ವೋಟ್ ಬ್ಯಾಂಕ್ ಗಾಗಿ ಇದೀಗ ಹಿಂದೂ ಸಮುದಾಯದವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಡಿಯೋ ನೋಡಿ:

Yogi Adithyanathna Chali bidisida Shreenivas

ಇತ್ತೀಚಿನ ಸುದ್ದಿ

Exit mobile version