ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ಆರೋಪಿಯಿಂದ ರಾಖಿ ಕಟ್ಟಿಸಬೇಕು | ಹೈಕೋರ್ಟ್ ತೀರ್ಪು!

02/11/2020

ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ವಿಲಕ್ಷಣವಾದ ಆದೇಶವೊಂದನ್ನು ನೀಡಿದ್ದು, ಈ ಆದೇಶವು ನಾಟಕ ಎಂದು ಅಟರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದರು.


ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ‘ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು’ ಎಂದು ಮಧ್ಯಪ್ರದೇಶ ಹೈಕೋರ್ಟ್ ಆರೋಪಿಗೆ  ನಿರ್ದೇಶಿಸಿತ್ತು. ಇದನ್ನು ನಾಟಕ ಎಂದು ಹೇಳಿರುವ  ಅಟರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌,  ಇದನ್ನು ಖಂಡಿಸಬೇಕು ಎಂದು ಹೇಳಿದ್ದಾರೆ.


‘ನ್ಯಾಯಾಧೀಶರಿಗೆ ಲಿಂಗ ಸೂಕ್ಷ್ಮತೆಯನ್ನು ಕಲಿಸಬೇಕು. ಇಂಥ ಆದೇಶವು ಸೂಕ್ತವಲ್ಲ ಎನ್ನುವುದನ್ನು ರಾಷ್ಟ್ರೀಯ ಕಾನೂನು ಅಕಾಡೆಮಿ ಮತ್ತು ರಾಜ್ಯ ಅಕಾಡೆಮಿಗಳು ತಿಳಿಯಪಡಿಸಬೇಕು. ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಲಿಂಗ ಸೂಕ್ಷ್ಮತೆಯ ಪಠ್ಯವಿರಬೇಕು ಎಂದು ಅವರು ಹೇಳಿದ್ದಾರೆ.


 ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ತೀರ್ಪು ನೀಡಿದ್ದ ಮಧ್ಯಪ್ರದೇಶ ವಿಲಕ್ಷಣವಾದ ತೀರ್ಪು ನೀಡಿತ್ತು. ಸಂತ್ರಸ್ತೆಗೆ ₹11 ಸಾವಿರ ಪರಿಹಾರ ನೀಡಿ ಅವರ ಆಶೀರ್ವಾದ ಪಡೆಯಬೇಕು. ಸಂತ್ರಸ್ತೆಯ ಮಗನಿಗೆ ಬಟ್ಟೆ ಹಾಗೂ ಸಿಹಿತಿಂಡಿ ಖರೀದಿಸಲು ₹5 ಸಾವಿರ ನೀಡಬೇಕು ಎಂದು ಸಂವಿಧಾನ ವಿರೋಧಿ ಆದೇಶವನ್ನು ನೀಡಿತ್ತು ಈ ತೀರ್ಪನ್ನು ಅಟರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಖಂಡಿಸಿದರು.


‘ಈ ವಿಷಯದ ಕುರಿತಾಗಿ ನ್ಯಾಯಾಧೀಶರುಗಳಿಗೆ ಮಾರ್ಗಸೂಚಿಗಳನ್ನು ನ.27ರಂದು ಪ್ರಕಟಿಸುವುದಾಗಿ’ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ಅವರಿದ್ದ ಪೀಠವು ತಿಳಿಸಿತು.


ಇತ್ತೀಚಿನ ಸುದ್ದಿ

Exit mobile version