12:33 AM Saturday 17 - January 2026

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ

tutukudi road accident
09/09/2021

ತೂತುಕುಡಿ: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸಾವನ್ನಪ್ಪಿ, 15 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.

ಗುರುವಾರ ಬೆಳಗ್ಗೆ ರೇಸ್‌ಕೋರ್ಸ್ ಬಳಿಯ ಪುತ್ತಿಯಮುತ್ತೂರು, ಮುತ್ತಲೈಪಟ್ಟಿ ಮತ್ತು ನಡುವಕುರಿಚಿ ಸೇರಿದಂತೆ ಪ್ರದೇಶಗಳಿಂದ ಮಹಿಳಾ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ವ್ಯಾನ್ ತೂತುಕುಡಿ ಬೈಪಾಸ್ ಕಡೆಗೆ ಹೋಗುತ್ತಿತ್ತು.

ವ್ಯಾನ್ ಸಿಲ್ಲಾನಾಥಂ ಬಳಿ ತಲುಪಿದಾಗ ಪುತ್ತೂರು ಪಾಂಡಿಯಪುರಂನಿಂದ ಹೊಸ ಮುತ್ತೂರಿಗೆ ತೆರಳುತ್ತಿದ್ದ ನೀರಿನ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವ್ಯಾನ್ ನಲ್ಲಿದ್ದ ಸೆಲ್ವರಾಣಿ, ಕಾಮತ್ಚಿ ಮತ್ತು ಸಂಧ್ಯಾ, ಮಣಿಮೇಗಲೈ ಎಂಬ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. 15 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಘಟನೆ ಸಂಬಂಧ ಹೊಸ ಮುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡ 15 ಕಾರ್ಮಿಕರನ್ನು ತೂತುಕುಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ.

ಇನ್ನಷ್ಟು ಸುದ್ದಿಗಳು…

ಡಾಬಾದಲ್ಲಿ ಊಟ ಮುಗಿಸಿ, ಬೈಕ್ ಹತ್ತಿದ ಸ್ನೇಹಿತರಿಬ್ಬರು ಕ್ಷಣ ಮಾತ್ರದಲ್ಲೇ ಸಾವು!

ವಿದ್ಯುತ್ ಚಾಲಿತ ವಾಹನ ಬಳಸಿದರೆ, ಪೆಟ್ರೋಲ್ ಬೆಲೆ ಇಳಿಯುತ್ತದೆ | ಸಚಿವ ನಾರಾಯಣ ಗೌಡ

“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ

ವಾನರ ಸೇನೆಯ ದಾಳಿ: ಎರಡನೇ ಮಹಡಿಯಿಂದ ಬಿದ್ದು ಬಿಜೆಪಿ ನಾಯಕನ ಪತ್ನಿ ಸಾವು

2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?

ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ

ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ

ಇತ್ತೀಚಿನ ಸುದ್ದಿ

Exit mobile version