12:12 AM Thursday 15 - January 2026

ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆಂದು ಹೋದವ ಕಾರಿನೊಂದಿಗೆ ಪರಾರಿ!: ಶೋರೂಂ ಸಿಬ್ಬಂದಿ ಕಂಗಾಲು

test drive
18/05/2022

ಮಧ್ಯಪ್ರದೇಶ: ಕಾರು ಖರೀದಿ ಮಾಡುತ್ತೇನೆ ಎಂದು ಫೋಸ್ ಕೊಟ್ಟು ರೂಂಗೆ ಬಂದ ವ್ಯಕ್ತಿಯೊಬ್ಬ  ಟೆಸ್ಟ್ ಡ್ರೈವ್‌ ನೆಪದಲ್ಲಿ ಕಾರನೊಂದಿಗೆ ಪರಾರಿಯಾದ ಘಟನೆ ನಡೆದಿದ್ದು, ಶೋರೂಂ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದ್ದಾನೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕಾರ್ ಶೋರೂಮ್‌ಗೆ  ಭೇಟಿಕೊಟ್ಟಿದ ಯುವಕ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಹೊಸ ಟಾಟಾ ಹ್ಯಾರಿಯರ್ ಪಡೆದು ಕಾರನ್ನು ವೇಗವಾಗಿ ಓಡಿಸಿ ಕ್ಷಣಾರ್ಧದಲ್ಲಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಶೋ ರೂಂ‌ ಸಿಬ್ಬಂದಿ ಬೆನ್ನಟ್ಟಿದರೂ ಈತ ಕೈಗೆ ಸಿಗಲಿಲ್ಲ.

20 ಲಕ್ಷ ರೂ. ಮೌಲ್ಯದ ಕಾರಿನೊಂದಿಗೆ ಪರಾರಿಯಾದ ಈತನನ್ನು ಹುಡುಕಲು  ಶೋ ರೂಂ ಸಿಬ್ಬಂದಿ ಪೊಲೀಸರ ಮೊರೆ ಹೋಗಿದ್ದಾರೆ.ಈ ವಾಹನ ಕಳ್ಳನ ಹಿಡಿದುಕೊಟ್ಟವರಿಗೆ 10,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಯಿತು.

ಘಟನೆ ನಡೆದ ನಾಲ್ಕು ಗಂಟೆಗಳ ನಂತರ ಖಜೂರಿ ಕೋಥರ್, ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನವನ್ನು ನಿಲ್ಲಿಸಲಾಗಿದೆ ಎಂಬ ಮಾಹಿತಿ ಬಂದಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಇದರೊಂದಿಗೆ ವಾಹನ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನೂ ಸಹ ಬಂಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಬಸ್ ಉಪ್ಪಿನಂಗಡಿ ಬಳಿ ಪಲ್ಟಿ!

ಮೇಡಂ ನನಗೊಂದು ಮದುವೆ ಮಾಡಿಸಿ: ವೃದ್ಧನ ಬೇಡಿಕೆ ಕೇಳಿ ಸಚಿವೆ ಕಂಗಾಲು

‘ಕೆಜಿಎಫ್ ಚಾಪ್ಟರ್ 2’ ಇನ್ನು ಅಮೆಜಾನ್ ಪ್ರೈಮ್ ನಲ್ಲಿ ಬಾಡಿಗೆಗೆ ಲಭ್ಯ

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನಿವಾಸಗಳ ಮೇಲೆ ಸಿಬಿಐ ದಾಳಿ

ಇತ್ತೀಚಿನ ಸುದ್ದಿ

Exit mobile version