3:46 PM Wednesday 17 - September 2025

ಸೀರತ್ ಅಭಿಯಾನ: ‘ಸ್ನೇಹಕೂಟ’  ಕಾರ್ಯಕ್ರಮ

seerat campaign
17/09/2025

ಕಾರ್ಕಳ: “ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ) ” ಸೀರತ್ ಅಭಿಯಾನದ ಅಂಗವಾಗಿ ದೇಶ ಬಾಂಧವವರಿಗಾಗಿ ‘ಸ್ನೇಹಕೂಟ’   ಕಾರ್ಯಕ್ರಮವನ್ನು ಶಾದಿ ಮಹಲ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿಯವರು ಭಾಗವಹಿಸಿ ದೇವಾಸ್ಥಿತ್ವ, ಮಾನವೀಯತೆ, ಮಾನವ ಜೀವನದ ವಾಸ್ತವಿಕತೆ ಮತ್ತು ಇಂದಿನ ಯುವ ಪೀಳಿಗೆಯ ನೈತಿಕ ವರ್ತನೆಗಳ ಕುರಿತು ಎಚ್ಚರಿಸಿದರು.

ಇನ್ನೋರ್ವ ಅತಿಥಿ ಜೊಕಿಂ ಪಿಂಟೊ ಅಧ್ಯಕ್ಷರು ಸಹಬಾಳ್ವೆ ಕಾರ್ಕಳ–ಇವರು ಈ ಸ್ನೇಹಕೂಟದ ಬಗ್ಗೆ ತಮಗಿರುವ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಕಾರ್ಕಳ ಮುಸ್ಲಿಂ ಜಮಾತಿನ ಅಧ್ಯಕ್ಷರಾದ ಜನಾಬ್ ಅಶ್ಫಾಕ್ ಅಹ್ಮದ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮವನ್ನು ನಿರೂಪಿಸಿದರು.

ದೇಶ ಬಾಂಧವರೆಲ್ಲರೂ ಕಾರ್ಯಕ್ರಮದಲ್ಲಿ ಬಹಳ ಹುರುಪಿನೊಂದಿಗೆ ಪಾಲ್ಗೊಂಡರು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version