ಕಾಫಿನಾಡು ಕಾಡು ನಕ್ಸಲರಿಂದ ಮುಕ್ತವಾಯ್ತಾ…?: ಲತಾ ಟೀಂನಲ್ಲಿದ್ದ ರವೀಂದ್ರ ಮಿಸ್ಸಿಂಗ್ !

raveendra
09/01/2025

ಚಿಕ್ಕಮಗಳೂರು:  ಕರ್ನಾಟಕ ನಕ್ಸಲ್ ಮುಕ್ತವಾಯ್ತು ಎಂದು ನಿನ್ನೆ 6 ನಕ್ಸಲರು ಶರಣಾದ ಬಳಿಕ ಹೇಳಲಾಗುತ್ತಿದೆ. ಆದರೆ, ಕಾಫಿನಾಡು ಕಾಡು ನಕ್ಸಲರಿಂದ ಮುಕ್ತಾವಾಯ್ತಾ…? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.

ಮುಂಡಗಾರು ಲತಾ ಟೀಂನಲ್ಲಿದ್ದ ರವೀಂದ್ರ ಶೃಂಗೇರಿ ಕಿಗ್ಗಾ ಮೂಲದ ರವೀಂದ್ರ ಮಿಸ್ಸಿಂಗ್…?  ಎನ್ನುವ ಮಾತುಗಳು ಕೇಳಿ ಬಂದಿದೆ. ಮುಂಡಗಾರು ಲತಾ ಟೀಂನಲ್ಲಿದ್ದ ರವೀಂದ್ರ,  ವಿಕ್ರಂಗೌಡ ಎನ್ ಕೌಂಟರ್ ಬಳಿಕ ಮುಂಡಗಾರು ಟೀಂನಿಂದ ದೂರವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮುಂಡಗಾರು ಲತಾ ಸೇರಿ 6 ಮಂದಿ ನಕ್ಸಲರು ನಿನ್ನೆ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ರಾಯಚೂರು ಮೂಲದ ಜಯಣ್ಣ ಅಲಿಯಾಸ್ ಮಾರೆಪ್ಪ ಅರೋಳಿ ಶರಣಾಗಿದ್ದಾರೆ. ಹಾಗಿದ್ರೆ ಜಯಣ್ಣ ಜೊತೆಗಿದ್ದ ರವೀಂದ್ರ ಎಲ್ಲಿ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ವಿಕ್ರಂಗೌಡ ಎನ್ ಕೌಂಟರ್ ಬಳಿಕ  ಶೃಂಗೇರಿಯ ಕಿಗ್ಗಾ ಮೂಲದ ರವೀಂದ್ರ…? ಸಂಪರ್ಕಕ್ಕೆ ಸಿಕ್ಕಿಲ್ಲ, ಆತ ಶರಣಾಗತಿ ಆಗಲ್ಲ ಎಂದಿದ್ದಾನಾ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. 6 ನಕ್ಸಲರು ಶರಣಾಗಿದ್ದಾರೆ. ಹಾಗಿದ್ರೆ ಈ ತಂಡದಲ್ಲಿದ್ದ ರವೀಂದ್ರ ಎಲ್ಲಿ ಎನ್ನುವ ಪ್ರಶ್ನೆ ಕೇಳಿ ಬಂದಿದೆ. ರವೀಂದ್ರ ಕೇರಳ ಅಥವಾ ಆಂಧ್ರ ಭಾಗಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

Exit mobile version