2:24 AM Saturday 18 - October 2025

ಪತಿಯನ್ನು ಯಾರೋ ಕೊಲೆ ಮಾಡಿದ್ದಾರೆ ಅಂದ್ಳು ಪತ್ನಿ: ಕಾಣೆಯಾದ ವ್ಯಕ್ತಿ ಕೊನೆಗೂ ಜೀವಂತವಾಗಿ ಪ್ರತ್ಯಕ್ಷ; ಕಾರಣ ಕೇಳಿದ ಪೊಲೀಸರಿಗೆ ಸುಸ್ತೋ ಸುಸ್ತು

29/07/2023

ಇದೊಂದು ವಿಚಿತ್ರ ಘಟನೆ. ಆಕೆ ಬಾಯಿಬಡುಕಿ. ಈತ ಸೌಮ್ಯ ಸ್ವಭಾವದವ.‌ ಅಂದರೆ ಹೆಂಡತಿ ಜೋರು. ಗಂಡ ಪಾಪ ಎಂದರ್ಥ. ಹೀಗಾಗಿ ಇಲ್ಲಿ ನಡೆಯಬಾರದ್ದು ನಡೆದು ಹೋಗಿದೆ.

ಹೌದು‌… ನನ್ನ ಪತಿಯನ್ನು ಯಾರೋ ಕೊಂದು ಹೂತುಹಾಕಿದ್ದಾರೆ ಎಂದಿದ್ದ ಪತ್ನಿಯೇ ಈಗ ಪೊಲೀಸರ ಅತಿಥಿಯಾಗಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

2021ರ ನವೆಂಬರ್‌ ನಲ್ಲಿ 34 ವರ್ಷದ ನೌಷಾದ್‌ ಕೇರಳದ ಪಥನಂತಿಟ್ಟ ಜಿಲ್ಲೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಈ ಕುರಿತು ಆತನ ಕುಟುಂಬಸ್ಥರು ಪೊಲೀಸ್‌ ದೂರು ನೀಡಿದ್ದರು. ಆದರೆ ಪತಿ ಕಾಣೆಯಾದ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದ 25 ವರ್ಷದ ಪತ್ನಿ ಅಫ್ಸಾನಾ ತನ್ನ ಪತಿಯನ್ನು ಯಾರೋ ಕೊಂದು, ಹೂತುಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದರು. ಪತ್ನಿಯ ಹೇಳಿಕೆ ಆಧರಿಸಿ ನೌಷಾದ್‌ ಹೆಣಕ್ಕಾಗಿ ಪೊಲೀಸರು ಇನ್ನಿಲ್ಲದ ಹುಡುಕಾಟ ನಡೆಸಿದ್ದರು.

ಆದರೆ ತನಿಖೆ ಮುಂದುವರೆಸಿದ್ದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಪ್ರಕರಣದ ಜಾಡು ಹಿಡಿದು ನೌಷಾದ್‌ ಹೆಣಕ್ಕಾಗಿ ಹುಡುಕಾಡುತ್ತಿದ್ದ ಪೊಲೀಸರಿಗೆ ಆತ ಜೀವಂತವಾಗಿಯೇ ಸಿಕ್ಕಿದ್ದಾನೆ. ಇಡುಕ್ಕಿ ಜಿಲ್ಲೆಯ ತೋಡುಪ್ಪುಝ ಪಟ್ಟಣದ ತೊಮ್ಮನಕೂಥು ಗ್ರಾಮದ ತೋಟದಲ್ಲಿ ಕೂಲಿಯಾಳಾಗಿ ಕೆಲಸ ಮಾಡುತ್ತಿದ್ದ ನೌಷಾದ್‌ ಪೊಲೀಸರಿಗೆ ಸಿಕ್ಕಿದ್ದಾನೆ.

ಕಾಣೆಯಾಗಿದ್ದವನನ್ನು ಹುಡುಕಿ ಸುಸ್ತಾಗಿದ್ದ ಪೊಲೀಸರಿಗೆ ಸಿಕ್ಕ ನೌಷಾದ್‌ ನ ಹತ್ತಿರ ಎಲ್ಲಪ್ಪಾ ಹೋಗಿದ್ದೆ..? ಎಂದು ವಿಚಾರಣೆ ನಡೆಸಿದಾಗ ತಾನು ಹೆಂಡತಿಗೆ ಹೆದರಿ ತಲೆಮರೆಸಿಕೊಂಡಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ.

ಹೆಂಡತಿ ತನ್ನ ಸಂಬಂಧಿಕರಿರನ್ನು ಕರೆಸಿ ನನಗೆ ಹೊಡೆಸುತ್ತಿದ್ದಳು. ಇದಕ್ಕೆ ಹೆದರಿ ನಾನು ಮನೆ ಬಿಟ್ಟುಹೋಗಿ ತಲೆಮರೆಸಿಕೊಂಡಿದ್ದೆ ಎಂದು ಹೇಳಿದ್ದಾನೆ. ಇದೀಗ ಪೊಲೀಸರ ದಿಕ್ಕು ತಪ್ಪಿಸಿದ್ದಕ್ಕಾಗಿ ಅಫ್ಸಾನಾಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version