11:59 AM Tuesday 14 - October 2025

KGF ಕಾಲದ ಪತ್ರಿಕೆ ಪತ್ತೆ | ರಾಕಿ ಬಾಯ್ ಬಗ್ಗೆ ಪತ್ರಿಕೆಯಲ್ಲಿ ಏನು ಬರೆಯಲಾಗಿದೆ ಗೊತ್ತಾ?

04/01/2021

ಕೆಜಿಎಫ್ ಕಾಲಘಟ್ಟದ ಪತ್ರಿಕೆಯೊಂದರ ಪುಟವನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದರಿಂದಾಗಿ ಕೆಜಿಎಫ್ ಚಾಪ್ಟರ್ 2 ಮತ್ತಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಕೆಜಿಎಫ್ ಚಿತ್ರದ ನಾಯಕ ಅಥವಾ ಖಳನಾಯಕ ರಾಕಿ ಭಾಯ್ ಅವರ ಬಗ್ಗೆ ಕೆಜಿಎಫ್ ಟೈಮ್ಸ್ ನಲ್ಲಿ ಬಂದಿರುವ ವರದಿಯ ತುಣುಕನ್ನು ಚಿತ್ರ ತಂಡ ಹಂಚಿಕೊಂಡಿದೆ.

ಕೆಜಿಎಫ್ ಟೈಮ್ಸ್ ನಲ್ಲಿ ರಾಕಿ ಬಾಯ್ ಬಗ್ಗೆ ಬರೆಯಲಾಗಿದೆ. ರಾಕಿ ಖಳನಾಯಕನಾ ಅಥವಾ ನಾಯಕನಾ ಎಂಬ ಬಗ್ಗೆ ವಿಮರ್ಶೆಯನ್ನು ಮಾಡಲಾಗಿದೆ. ರಾಕಿ ಭಾಯ್ ನಾಯಕನೂ ಹೌದು ಖಳನಾಯಕನೂ ಹೌದು ಎಂದು ವಿಮರ್ಶಿಸಲಾಗಿದೆ.

ಅಷ್ಟಕ್ಕೂ ಇದೊಂದು ಕಾಲ್ಪನಿಕವಾದ ಪತ್ರಿಕೆಯಾಗಿದೆ. ಈ ಪತ್ರಿಕೆಯನ್ನು ಚಿತ್ರತಂಡ  ಹಂಚಿಕೊಳ್ಳುವ ಮೂಲಕ ಮತ್ತಷ್ಟು ಹವಾ ಸೃಷ್ಟಿಸಿದೆ. ಚಿತ್ರದ ಹಿಟ್ ಡೈಲಾಗ್ ಗಳನ್ನು ಪತ್ರಿಕೆಯ ಶೀರ್ಷಿಕೆಯಲ್ಲಿ ನೀಡಲಾಗಿದೆ.

ಕೆಜಿಎಫ್ ಟೈಮ್ಸ್ ಪತ್ರಿಕೆಯ ತುಣುಕು ಇದೀಗ ವ್ಯಾಪಕ ವೈರಲ್ ಆಗಿದ್ದು, ಸಿನಿಪ್ರಿಯರಿಗೆ ಹೊಸ ಹುರುಪು  ನೀಡಿದೆ. ಯಶ್ ಅವರ ಫ್ಯಾನ್ಸ್ ಗಂತೂ ಈ ಪತ್ರಿಕೆ ಒಂದು ಅಚ್ಚರಿಯಾಗಿಯೇ ಕಂಡು ಬಂದಿದೆ. ಕೆಜಿಎಫ್ ಚಾಫ್ಟರ್ 2 ನಲ್ಲಿ ಬೃಹತ್ ತಾರಾ ಬಳಗವೇ ಇದೆ. ಹೀಗಾಗಿ ಸಿನಿ ಪ್ರಿಯರ ನಿರೀಕ್ಷೆಯೂ ಹೆಚ್ಚಾಗಿದೆ.

ಇತ್ತೀಚಿನ ಸುದ್ದಿ

Exit mobile version