ಚಾಲಕನನ್ನು ಎಳೆದು ಹಾಕಿ ಕೇರಳಕ್ಕೆ ತೆರಳುತ್ತಿದ್ದ ಉದ್ಯಮಿಯ ಅಪಹರಣ: ದುಷ್ಕರ್ಮಿಗಳನ್ನು ಬೆನ್ನಟ್ಟುತ್ತಿರುವ ಪೊಲೀಸರು

beguru police
11/08/2023

ಗುಂಡ್ಲುಪೇಟೆ:  ಉದ್ಯಮಿಯನ್ನು  ದುಷ್ಕರ್ಮಿಗಳ ತಂಡವೊಂದು ಅಪಹರಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿ‌ನ ಬೇಗೂರು ಸಮೀಪ ನಡೆದಿದೆ.

ಕೇರಳಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಮಹಾರಾಷ್ಟ್ರ ಮೂಲದ ಉದ್ಯಮಿ ಶಿವು ಅಪಹರಣವಾದ ಉದ್ಯಮಿಯಾಗಿದ್ದು, ಮೂರು ಕಾರುಗಳಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳು ಬೇಗೂರಿನ ಮುಖ್ಯರಸ್ತೆಯಲ್ಲಿ ಉದ್ಯಮಿಯ ಕಾರನ್ನು ಅಡ್ಡಗಟ್ಟಿ, ಚಾಲಕನನ್ನು ಹೊರಗಡೆಳೆದು ಹಾಕಿ ಉದ್ಯಮಿಯನ್ನು ಅಪಹರಿಸಿದ್ದಾರೆ.

ಅಪಹರಣಕ್ಕೊಳಗಾದ ಉದ್ಯಮಿಯನ್ನು ಹಾಗೂ ದುಷ್ಕರ್ಮಿಗಳನ್ನು ಬೇಗೂರು ಪೊಲೀಸರು ಬೆನ್ನಟ್ಟುತ್ತಿದ್ದಾರೆ. ಸದ್ಯ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಐವರನ್ನು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕಬಂದಿ ಹಾಕಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version