ಏಪ್ರಿಲ್ 18ರಂದು ‘ಕೋರ’ ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ: ಪಿ.ಮೂರ್ತಿ

ಉಡುಪಿ: ಏಪ್ರಿಲ್ 18ರಂದು ಕನ್ನಡದ ‘ಕೋರ; ಚಿತ್ರ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಪಿ.ಮೂರ್ತಿ ತಿಳಿಸಿದರು.
ಉಡುಪಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಒರಟ ಶ್ರೀ ನಿರ್ದೇಶಿಸಿದ್ದಾರೆ. ನಟ ಸುನಾಮಿ ಕಿಟ್ಟಿ ಈ ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು.
ಕೋರ ನಮ್ಮ ನೆಲದ ಕಥೆಯಾಗಿದೆ. ಕೊರಗಜ್ಜನ ಆಶೀರ್ವಾದದಿಂದ ಈ ಚಿತ್ರ ಆರಂಭಗೊಂಡಿದೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕಥೆಯನ್ನ ಈ ಚಿತ್ರ ಹೊಂದಿದೆ ಎಂದು ಅವರು ತಿಳಿಸಿದರು.
ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಮೊದಲಾದ ಕಡೆಗಳಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ, ನಾನು ಕಠೋರ ಎಂಬ ಪಾತ್ರವನ್ನು ಚಿತ್ರದಲ್ಲಿ ನಿರ್ವಹಿಸಿರುವುದಾಗಿ ಪಿ.ಮೂರ್ತಿ ತಿಳಿಸಿದರು.
ನಿರ್ದೇಶಕ ಒರಟ ಶ್ರೀ ಮಾತನಾಡಿ, ಇದು ವಿಶಿಷ್ಟ ವಿಷಯವನ್ನು ಹೊಂದಿರುವ ಕಮರ್ಷಿಯಲ್ ಚಿತ್ರವಾಗಿದೆ. ಇದು ಕನ್ನಡ ಚಿತ್ರವಾಗಿದ್ದರೂ ಇತರ ಎಲ್ಲಾ ಭಾಷೆಗಳೊಂದಿಗೆ ಕಥೆ ಸಂಪರ್ಕ ಸಾಧಿಸಬಹುದು ಎಂದರು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: