4:02 AM Wednesday 15 - October 2025

ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ತೆರಳುತ್ತಿದ್ದ ಬಸ್ ಮೂಡಬಿದಿರೆಯಲ್ಲಿ ಪಲ್ಟಿ!

bus
03/08/2022

ಮೂಡಬಿದಿರೆ: ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ತೆರಳುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮೂಡಬಿದಿರೆಯ ಬನ್ನಡ್ಕದ ಎಸ್ ಕೆಎಫ್ ಬಳಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಕೆಕೆಬಿ ಹೆಸರಿನ ಬಸ್ ಮಗುಚಿ ಬಿದ್ದ ಬಸ್ ಆಗಿದ್ದು, ಚಾಲಕ ಹಾಗೂ ಓರ್ವ ಮಹಿಳಾ ಪ್ರಯಾಣಿಕಳಿಕೆ ಗಾಯವಾಗಿದೆ  ಎಂದು ತಿಳಿದು ಬಂದಿದೆ.

ಬನ್ನಡ್ಕದ ಎಸ್ ಕೆ ಎಫ್ ಬಳಿ ಎದುರಿನಿಂದ ಬರುತ್ತಿದ್ದ ಆಟೋಗೆ ದಾರಿ ಕೊಡುವ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಮಗುಚಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version