ಕುಡಿತ ಬದುಕು ಕೆಡಿಸಿತು: ಕುಡಿಯಲು ಹಣ ಸಿಗದೇ ಆತ್ಮಹತ್ಯೆಗೆ ಶರಣಾದ!
ಕುಂದಾಪುರ: ಮದ್ಯಪಾನ ಮಾಡಲು ಹಣ ಸಿಗದೆ ಮನನೊಂದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ ಹಕ್ಲಮನೆ ಎಂಬಲ್ಲಿ ಆ.19ರಂದು ಸಂಜೆ ನಡೆದಿದೆ.
ಕೆಂಚನೂರು ಗ್ರಾಮದ ಹಕ್ಲಮನೆ ನಿವಾಸಿ 52 ವರ್ಷದ ಮೋಹನ ಶೆಟ್ಟಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ ಮನೆಯವರು ಎಲ್ಲರೂ ಶೃಂಗೇರಿಗೆ ಹೋಗಿದ್ದು, ಮೋಹನ ಶೆಟ್ಟಿ ಹೋಗಲು ಒಪ್ಪದೆ ಮನೆಯಲ್ಲೆ ಉಳಿದಿದ್ದರು. ಶೃಂಗೇರಿಗೆ ತೆರಳಿದ್ದ ಮೋಹನ ಶೆಟ್ಟಿಯ ಮಗ ಗಣೇಶ ಶೆಟ್ಟಿ ಅವರಿಗೆ ನಿನ್ನೆ ಸಂಜೆ ನೆರಮನೆಯ ಉದಯ ಶೆಟ್ಟಿ ಎಂಬವರು ಕರೆ ಮಾಡಿ, ನಿಮ್ಮ ತಂದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅದರಂತೆ ಸಂಜೆ 7.30ಕ್ಕೆ ಬಂದು ನೋಡಿದಾಗ ಮನೆಯ ಜಂತಿಗೆ ಸ್ಕರ್ಟನ್ ಬಟ್ಟೆಯಿಂದ ನೇಣು ಬಿಗಿದುಕೊಂಡು ಮೋಹನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಮದ್ಯಪಾನ ಮಾಡಲು ಹಣದ ಅಡಚಣೆಯಾದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಗ ಗಣೇಶ್ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























