2:10 PM Wednesday 20 - August 2025

ದೇವಸ್ಥಾನದ ಕೆರೆಯಲ್ಲಿದ್ದ ಮೊಸಳೆ ಗರ್ಭಗುಡಿಯಲ್ಲಿ ಪ್ರತ್ಯಕ್ಷ!

21/10/2020

ಕಾಸರಗೋಡು: ಜಿಲ್ಲೆಯ ಕುಂಬಳೆಯ ಅನಂತಪುರ ದೇವಸ್ಥಾನದ ಕೆರೆಯಲ್ಲಿದ್ದ ಮೊಸಳೆಯೊಂದು ಮಂಗಳವಾರ ರಾತ್ರಿ ಗರ್ಭಗುಡಿಗೆ ಬಂದು ಶಾಕ್ ನೀಡಿದೆ.

ದೇವಸ್ಥಾನದ ಕೆರೆಯಲ್ಲಿ ಹಲವಾರು ವರ್ಷಗಳಿಂದ ಈ ಮೊಸಳೆ ಇದೆ. ಈ ಮೊಸಳೆಯ ಹೆಸರು ಬಬಿಯಾ. ಪೂಜೆಯ ಬಳಿಕ ಈ ಮೊಸಳೆಗೆ ನೈವೇದ್ಯ ಅರ್ಪಿಸಲಾಗುತ್ತಿತ್ತು. ಇದು ಇಲ್ಲಿನ ಸಂಪ್ರದಾಯ ಕೂಡ ಆಗಿದೆ.

ಈವರೆಗೆ ಗರ್ಭಗುಡಿಗೆ ಬಾರದ ಮೊಸಳೆ ಈಗ ಹೇಗೆ ಬಂತು ಎಂದು ಇಲ್ಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊಸಳೆ ಆಹಾರ ಅರಸಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ದೇವರ ನಂಬಿಕೆಯಲ್ಲಿರುವವರು ಇದೊಂದು ಪವಾಡ ಎಂದು ಭಾವಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version