4:54 AM Wednesday 20 - August 2025

ಸಾವಿರ ಜನ ವಿರೋಧ ಮಾಡಲಿ, ಇದು ನನ್ನ ನಂಬಿಕೆಯ ವಿಚಾರ: ಡಿ.ಕೆ.ಶಿವಕುಮಾರ್

d k shivakumar
27/02/2025

ಬೆಂಗಳೂರು: ಸಾವಿರ ಜನ ವಿರೋಧ ಮಾಡಲಿ, ಇದು ನನ್ನ ನಂಬಿಕೆಯ ವಿಚಾರ ಎಂದು ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್(D.K.Shivakumar) ಹೇಳಿದ್ದು,  ದೊಡ್ಡ ನಾಯಕರ ಮಾತಿಗೆ ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಹೋಗಿದ್ದ ಶಿವರಾತ್ರಿ(Shivaratri)ಗೆ, ಇದು ನನ್ನ ಸ್ವಂತ ನಂಬಿಕೆ ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಗೆ ಟಾಂಗ್ ನೀಡಿದ ಅವರು,  ಇದು ನನ್ನ ವೈಯಕ್ತಿಕ ನಂಬಿಕೆ ಹೋಗಿದ್ದೇನೆ… ಎಂದು ಹೇಳಿದರು.

ಇನ್ನೂ ಸದ್ಗುರು ಅವರನ್ನು ರಾಹುಲ್ ಗಾಂಧಿ ವಿರೋಧಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಸದ್ಗುರು ನಮ್ಮ ರಾಜ್ಯದವರು, ಮೈಸೂರಿನವರು ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದ್ದರು. ಅವರ ಫೌಂಡೇಶನ್ ನಿಂದ ಒಳ್ಳೆಯ ಕೆಲಸ ಆಗಿದೆ. ಖುದ್ದು ಅವರೇ ಕರೆದಿದ್ದಕ್ಕೆ ಹೋಗಿದ್ದೇನೆ. ಅವರ ಆಚಾರ ವಿಚಾರ ಮೆಚ್ಚಿಕೊಂಡಿರುವುದಾಗಿ ತಿಳಿಸಿದರು.

ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ ಎಂಬ ಮಾತನ್ನು ಬಿಜೆಪಿ ಸ್ವಾಗತಿಸಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾಕೆ ಬೇರೆ ಧರ್ಮಕ್ಕೆ ಹೋಗಲಿ ಎಂದು ಮರು ಪ್ರಶ್ನಿಸಿದರಲ್ಲದೇ, ನನಗೆ ಎಲ್ಲ ಧರ್ಮದ ಬಗ್ಗೆ ಪ್ರೀತಿ ನಂಬಿಕೆ ಇದೆ ಎಂದರು.

ಯಾರೂ ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿಲ್ಲ, ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ ಬೌದ್ಧ ಧರ್ಮಕ್ಕೆ ಸೇರಿಕೊಂಡರು ಅದು ಅವರ ಇಷ್ಟ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ ಎಂದರು.

ಕುಂಭಮೇಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಗಾಳಿ, ನೀರಿಗೆ ಜಾತಿ ಇದೆಯಾ? ಅಲ್ಲಿಯೂ 3 ನದಿ ಸೇರುತ್ತದೆ, ಟಿ.ನರಸೀಪುರದಲ್ಲೂ 3 ನದಿ ಸೇರುತ್ತದೆ. ಅದು ಕಮ್ಯುನಲ್ ಅಲ್ಲ, ಮೊದಲಿಂದಲೂ ಅದೊಂದು ಪದ್ಧತಿ ಧರ್ಮದಲ್ಲಿ ನಡೆದುಕೊಂಡು ಬಂದಿದೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version