10:24 PM Wednesday 24 - December 2025

ಲೋಕಾಯುಕ್ತ ದಾಳಿ: ಫೈಲ್ ಒಳಗೆ ಹಣ ಇಡು ಎಂದು ಪರಾರಿಯಾದ ಕಾರ್ಮಿಕ ಇಲಾಖೆ ನೀರೀಕ್ಷಕ

lokayukta
03/03/2023

ಚಾಮರಾಜನಗರ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ಮಿಕ ಇಲಾಖೆ ನಿರೀಕ್ಷಕರೊಬ್ಬರು ಲೋಕ ದಾಳಿಯಾದ ವೇಳೆ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲದ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು ಎಂಬವರು ಪರಾರಿಯಾಗಿದ್ದಾರೆ. ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಕಬ್ಬಿಣದ ಅಂಗಡಿ ವ್ಯಾಪಾರಿ ಲಕ್ಷ್ಮಣ್ ಇಲಾಖೆಯಿಂದ ಅನುಮತಿ ಪಡೆಯಲು ಅರ್ಜಿ ಹಾಕಿದ ವೇಳೆ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು 5 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಒಂದು ಸಾವಿರ ಅಡ್ವಾನ್ಸ್ ಪಡೆದದ್ದರು. ಅದೇ ಗ್ರಾಮದ ಪೈಪ್ ಮತ್ತು ಇನ್ನಿತರ ವ್ಯಾಪಾರಿ ದಗ್ಲರಾಮ್  ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆಯಲು ಹೋದ ವೇಳೆ 6 ಸಾವಿರ ಲಂಚ ಕೇಳಿದ್ದು ಇದರಲ್ಲಿ 3 ಸಾವಿರ ಮೊದಲನೇ ಕಂತು ಕೊಟ್ಟಿದ್ದರು‌.

ಇಬ್ಬರು ವ್ಯಾಪಾರಿಗಳು ಈ ಲಂಚದಿಂದ ಬೇಸತ್ತು ಲೋಕಾಯುಕ್ತರಿಗೆ ದೂರು ಕೊಟ್ಟಿದ್ದರು. ದೂರು ಪಡೆದ ಲೋಕಾಯುಕ್ತರು ಶುಕ್ರವಾರ ಸಂಜೆ ದಾಳಿ ನಡೆಸಿದ ವೇಳೆ ಫೈಲ್ ನಲ್ಲಿ ಹಣ ಇಡು ಎಂದು ಚಂದ್ರು ಹೇಳಿದ್ದಾರೆ. ಬಳಿಕ, ಲಂಚದ ಹಣ ಇಟ್ಟ ಬಳಿಕ ಚಂದ್ರು ಹೊರ ಹೋಗಿದ್ದು ಮಧ್ಯವರ್ತಿ ಸಾಗರ್  ಎಂಬಾತ ಫೈಲ್ ನಿಂದ ಹಣ ಎತ್ತಿಕೊಂಡಿದ್ದಾನೆ. ಇದಾದ ಬಳಿಕ ಲೋಕಾ ದಾಳಿಯಾಗುತ್ತಿದ್ದಂತೆ ಚಂದ್ರು ಪರಾರಿಯಾಗಿದ್ದು ಸಾಗರ್ ನನ್ನು ಲೋಕಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version